ADVERTISEMENT

ಕೊಲ್ಹಾಪುರದಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಗುಂಪಿನಿಂದ ಹಲ್ಲೆ: 12 ಮಂದಿಗೆ ಗಾಯ

ದುಷ್ಕರ್ಮಿಗಳ ಮೇಲೆ ಖಾರದ ಪುಡಿ ಎರಚಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 14:38 IST
Last Updated 25 ಡಿಸೆಂಬರ್ 2018, 14:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲ್ಹಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಗ್ರಾಮವೊಂದರಲ್ಲಿ ಕ್ರೈಸ್ತರಭಾನುವಾರದ ಸಾಮೂಹಿಕಪ್ರಾರ್ಥನೆ ವೇಳೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.ಡಿಸೆಂಬರ್ 23ರಂದು ಇಲ್ಲಿನ ಚಾಂದ್‍ಗಡ್ತಾಲೂಕಿನಕೋವಾಡ್‍ ಎಂಬಲ್ಲಿ ಭೀಮ್‍ಸೇನ್ ಚವಾಣ್ ಎಂಬವರ ಮನೆಯಲ್ಲಿ ಮಹಿಳೆಯರು, ಮಕ್ಕಳು ಭಾನುವಾರದ ಸಾಮೂಹಿಕಪ್ರಾರ್ಥನೆಗಾಗಿ ನೆರೆದಿದ್ದರು. ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಅಲ್ಲಿಗೆ ಬಂದ 10-15 ಆಗಂತುಕರು ಅಲ್ಲಿ ನೆರೆದಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ 12 ಮಂದಿಗೆ ಗಾಯಗಳಾಗಿದ್ದು, ಇದರಲ್ಲಿ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಟೈಮ್ಸ್ ನೌ ನ್ಯೂಸ್ ಡಾಟ್ ಕಾಂ ವರದಿ ಮಾಡಿದೆ.

ಮಹಾರಾಷ್ಟ್ರ ಪೊಲೀಸರ ಪ್ರಕಾರ ಆಗಂತುಕರು ಬಾಟಲಿ, ಕಲ್ಲು, ಹಾಕಿ ಸ್ಟಿಕ್ ಮತ್ತು ಹರಿತ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದದುಷ್ಕರ್ಮಿಗಳುಬೆಳಗಾವಿಯತ್ತ ಪರಾರಿಯಾಗಿದ್ದು, ಈ ವೇಳೆ ದಿಂಡಲ್ಕೊಪ್ ಮತ್ತು ತಲಗುಳಿ ಗ್ರಾಮದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ.

ADVERTISEMENT

ದುಷ್ಕರ್ಮಿಗಳು ಮುಖವಾಡ ಧರಿಸಿದ್ದರು. ಇವರ ಪತ್ತೆಗಾಗಿ ನಾಲ್ಕು ತಂಡ ರಚಿಸಿದ್ದು, ಅಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ ಪೊಲೀಸರು.ದುಷ್ಕರ್ಮಿಗಳು 10 ಬೈಕುಗಳಲ್ಲಿ ಬಂದಿದ್ದು, ವಾಹನದ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ.ದಾಳಿಕೋರರು ಕರ್ನಾಟಕ ಮೂಲದವರು ಎಂದು ಸಂದೇಹ ವ್ಯಕ್ತಪಡಿಸಲಾಗಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ ಹಲ್ಲೆಕೋರರು ಬಲವಂತವಾಗಿ ಮನೆಯೊಳಗೆ ನುಗ್ಗಲು ಪ್ರಯತ್ನಿಸಿದಾಗ ಅಲ್ಲಿದ್ದ ಮಹಿಳೆಯರು ಖಾರದ ಪುಡಿ ಎರೆಚಿದ್ದಾರೆ.
ಈ ಘಟನೆ ಬಗ್ಗೆ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ಕೆ. ರೆಹಮಾನ್ ಖಾನ್, ಬಿಜೆಪಿ ಅಧಿಕಾರಕ್ಕೇರಿದ ನಂತರ ಬಜರಂಗ ದಳ ಮತ್ತು ರಾಮ ಸೇನೆ ಪುಂಡಾಟಿಕೆ ಮಾಡುತ್ತಿದೆ.ಅವರು ಬೇರೆ ಧರ್ಮದವರನ್ನು ಗೌರವಿಸುವುದಿಲ್ಲ, ಸರ್ಕಾರ ಇದನ್ನು ನೋಡಿ ಮೂಕ ಪ್ರೇಕ್ಷಕನಂತೆ ಕುಳಿತಿದೆ ಎಂದಿದ್ದಾರೆ.

ಇದೀಗ ಇಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹಲ್ಲೆ ನಡೆಸಿರುವುದರ ಹಿಂದಿರುವ ಕಾರಣ ಏನೆಂಬುದು ಪತ್ತೆಯಾಗಿಲ್ಲ.ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.