ADVERTISEMENT

ಕ್ರಿಸ್‌ಮಸ್‌ ಸಂಭ್ರಮ: ಶುಭ ಕೋರಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2023, 6:03 IST
Last Updated 25 ಡಿಸೆಂಬರ್ 2023, 6:03 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

-ಪಿಟಿಐ ಚಿತ್ರ

ಬೆಂಗಳೂರು: ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಎಚ್‌.ಡಿ ದೇವೆಗೌಡ ಸೇರಿದಂತೆ ಗಣ್ಯರು ಶುಭ ಕೋರಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಸಂತೋಷ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ. ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಈ ಹಬ್ಬ ಸಂಕೇತಿಸುತ್ತದೆ. ಉತ್ತಮ ಸಮಾಜ ನಿರ್ಮಿಸಲು ಹಾಗೂ ಅಭಿವೃದ್ಧಿ ಕಡೆಗೆ ಕೆಲಸ ಮಾಡೋಣ. ಯೇಸು ಕ್ರಿಸ್ತನ ಬೋಧನೆಗಳನ್ನು ಸದಾ ನೆನಪಿಸಿಕೊಳ್ಳೋಣ’ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ನಿಮ್ಮ ಹೃದಯ ಪ್ರೀತಿಯಿಂದ, ನಿಮ್ಮ ಮನೆ ಸಂತೋಷದಿಂದ ಹಾಗೂ ನಿಮ್ಮ ಜೀವನವು ಶಾಂತಿಯಿಂದ ತುಂಬಿರಲಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಭ ಕೋರಿದ್ದಾರೆ

‘ಯೇಸು ಕ್ರಿಸ್ತನ ಜೀವನ ಸಂದೇಶಗಳಾದ ಪ್ರೀತಿ, ಕ್ಷಮೆ, ದಯಾಗುಣಗಳು ಎಲ್ಲರ ಬದುಕಿಗೆ ದಾರಿದೀಪವಾಗಲಿ. ಸುಖ, ಶಾಂತಿ, ಸಮೃದ್ಧಿ ನಾಡಿನಲ್ಲಿ ತುಂಬಿರಲಿ’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ಮಾನವ ಜಗತ್ತಿಗೆ ಅಹಿಂಸೆಯ ಮಹತ್ವ ತಿಳಿಸಿ, ಶಾಂತಿ ಸಂದೇಶದ ಸಾರ ತಿಳಿಸಿದ ಯೇಸು ಕ್ರಿಸ್ತರನ್ನು ಈ ಪವಿತ್ರ ದಿನದಂದು ಸ್ಮರಿಸೋಣ. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಸಂತೋಷ, ಉತ್ತಮ ಆರೋಗ್ಯ ನೆಮ್ಮದಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

‘ಯೇಸು ಕ್ರಿಸ್ತನು ಜಗತ್ತಿಗೆ ಶಾಂತಿ ಮತ್ತು ಸಂತೋಷವನ್ನು ತರಲಿ’. ನಿಮಗೆಲ್ಲರಿಗೂ ಕ್ರಿಸ್‌ ಮಸ್‌ ಹಬ್ಬದ ಶುಭಾಶಯಗಳು ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೆಗೌಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕ್ರಿಸ್‌ಮಸ್ ಹಬ್ಬವು ಭಕ್ತಿ, ಸೌಹಾರ್ದತೆಯ ಸಂಗಮವಾಗಿದ್ದು, ಯೇಸು ಕ್ರಿಸ್ತರ ಜನ್ಮದಿನವಾದ ಈ ದಿನ ಪ್ರತಿಯೊಬ್ಬರಿಗೂ ಶಾಂತಿ, ಸಹಬಾಳ್ವೆ ಹಾಗೂ ಸಹಿಷ್ಣುತೆಯಿಂದ ಜೀವಿಸಲು ಪ್ರೇರಣೆಯಾಗಲಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.