ADVERTISEMENT

ಐಸಿಎಸ್‌ಇ 10 ಮತ್ತು 12ನೇ ತರಗತಿಗಳ ಪರೀಕ್ಷೆ ದಿನಾಂಕ ಪ್ರಕಟ

ಪಿಟಿಐ
Published 1 ಮಾರ್ಚ್ 2021, 20:40 IST
Last Updated 1 ಮಾರ್ಚ್ 2021, 20:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇಂಡಿಯನ್‌ ಸರ್ಟಿಫಿಕೆಟ್‌ ಆಫ್‌ ಸೆಕಂಡರಿ ಎಜುಕೇಶನ್‌ (ಐಸಿಎಸ್‌ಇ) 10 ಮತ್ತು 12ನೇ ತರಗತಿಗಳ ಪರೀಕ್ಷಾ ದಿನಾಂಕ ಪ್ರಕಟಿಸಿದ್ದು, 12ನೇ ತರಗತಿ ಪರೀಕ್ಷೆಗಳು ಏಪ್ರಿಲ್‌ 8ರಿಂದ ಹಾಗೂ 10ನೇ ತರಗತಿ ಪರೀಕ್ಷೆಗಳು ಮೇ 5ರಿಂದ ಆರಂಭವಾಗಲಿವೆ.

‘10ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಮೇ 5ರಿಂದ ಜೂನ್‌ 7ರವರೆಗೆ ನಡೆಯಲಿವೆ. ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ ಎಕ್ಸಾಮಿನೇಷನ್‌ (ಐಎಸ್‌ಸಿ) 12ನೇ ತರಗತಿಗೆ ಏಪ್ರಿಲ್‌ 8ರಿಂದ ಜೂನ್‌ 16ರವರೆಗೆ ಪರೀಕ್ಷೆ ನಡೆಸಲಿದೆ’ ಎಂದು ಸಿಐಸಿಎಸ್‌ಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.

ಏಪ್ರಿಲ್‌ 8ರಂದು 12ನೇ ತರಗತಿಗೆ ಕಂಪ್ಯೂಟರ್‌ ಸೈನ್ಸ್‌ ಪರೀಕ್ಷೆ (ಪ್ರಾಯೋಗಿಕ) ನಡೆಯಲಿದ್ದು, ಪರೀಕ್ಷಾ ಅವಧಿ 3 ಗಂಟೆಯ 90 ನಿಮಿಷಗಳಿಗೆ ನಿಗದಿಪಡಿಸಲಾಗಿದೆ. ಉಳಿದ ವಿಷಯಗಳ ಪರೀಕ್ಷೆಗಳು ಏ.9ರಿಂದ ನಡೆಯಲಿವೆ.

ADVERTISEMENT

‘ಜುಲೈ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ನವದೆಹಲಿಯ ಕೌನ್ಸಿಲ್ ಕಚೇರಿಯಲ್ಲಿ ಪ್ರಕಟಿಸುವುದಿಲ್ಲ. ಅಭ್ಯರ್ಥಿಗಳು, ಪೋಷಕರಿಂದ ಈ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಸ್ವೀಕರಿಸುವುದಿಲ್ಲ. ಸಂಚಾಲಕರ ಮೂಲಕ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಫಲಿತಾಂಶದ ಪಟ್ಟಿ ಕಳುಹಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.