ADVERTISEMENT

ನಕಲಿ ಇ-ಮೇಲ್ ರಚಿಸಿ, ಸುಳ್ಳು ಸಂದೇಶ ರವಾನೆ; ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಬಂಧನ

ಪಿಟಿಐ
Published 25 ಆಗಸ್ಟ್ 2021, 10:21 IST
Last Updated 25 ಆಗಸ್ಟ್ 2021, 10:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ನಕಲಿ ಇ-ಮೇಲ್ ಐಡಿ ರಚಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ತರಬೇತಿ ಕೇಂದ್ರದ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸಿರುವ ಆರೋಪದಡಿಯಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್‌ ಒಬ್ಬರನ್ನು ಬಂಧಿಸಲಾಗಿದೆ.

28 ವರ್ಷದ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ವಿರುದ್ಧ ದೂರು ದಾಖಲಿಸಲಾಗಿದೆ. ನಕಲಿ ಖಾತೆಯನ್ನು ರಚಿಸಿದ ಸಿಬ್ಬಂದಿ, ಸಿಐಎಸ್‌ಎಫ್ ಕೇಂದ್ರ ಕಚೇರಿಗೆ ಸುಳ್ಳು ಸಂದೇಶ ರವಾನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲಾಧಿಕಾರಿಗಳೊಂದಿಗೆ ಜಗಳವಾಡಿದ್ದ ಕಾನ್‌ಸ್ಟೇಬಲ್‌ಗೆ ರಜೆ ದೊರಕಿರಲಿಲ್ಲ. ಆತ ತನ್ನ ಸಹೋದ್ಯೋಗಿಯ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ರಚಿಸಿ ನವದೆಹಲಿಯಲ್ಲಿರುವ ಪ್ರಧಾನ ಕಚೇರಿಗೆ ಸುಳ್ಳು ಸಂದೇಶಗಳನ್ನು ಕಳುಹಿಸಿದ್ದರು. ತರಬೇತಿ ಕೇಂದ್ರ, ಆಡಳಿತ, ಕರ್ತವ್ಯ ವ್ಯವಸ್ಥೆ ಕೆಟ್ಟದಾಗಿದ್ದು, ಸಿಬ್ಬಂದಿಗೆ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಬಳಿಕ ಸಿಕ್ಕಿಬೀಳುವುದನ್ನು ತಪ್ಪಿಸಲು ಮೊಬೈಲ್‌ನಿಂದ ಇ-ಮೇಲ್ ಐಡಿಯನ್ನು ಅಳಿಸಿ ಹಾಕಿದರು. ಆದರೆ ತಾಂತ್ರಿಕ ಪುರಾವೆ ಆಧಾರದಲ್ಲಿ ಡೇಟಾ ಕಲೆ ಹಾಕಿದ ಪೊಲೀಸರು, ಸಿಐಎಸ್‌ಎಫ್ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.