ಪಟನಾ: ಬಿಹಾರದಲ್ಲಿ ಭಾನುವಾರ ಸಿವಿಲ್ ಸರ್ವೀಸ್ ಪರೀಕ್ಷೆ ನಡೆದಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಬಿಹಾರದ ರಾಜ್ಯಪಾಲರು ಕೈಗೊಂಬೆಯೇ? ಎಂಬ ಪ್ರಶ್ನೆಗೆ ಯಾವ ರೀತಿ ಉತ್ತರಿಸಬೇಕು ಎಂದು ತಿಳಿಯದೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.
ಪ್ರಧಾನ ಪರೀಕ್ಷೆಯ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆ ಹೀಗಿತ್ತು- ರಾಜ್ಯ ರಾಜಕಾರಣದಲ್ಲಿ ರಾಜ್ಯಪಾಲರ ಪಾತ್ರವೇನು? ವಿಶೇಷವಾಗಿ ಬಿಹಾರದಲ್ಲಿ, ಅವರು ಕೈಗೊಂಬೆಯೇ? ಈ ಪ್ರಶ್ನೆಗೆ ಯಾವ ರೀತಿ ಉತ್ತರಿಸಬೇಕು ತಿಳಿಯದೆ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರದ ಸಾರ್ವಜನಿಕ ಸೇವಾ ಆಯೋಗದ ಅಧಿಕಾರಿಗಳು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಕಾರ್ಯದಲ್ಲಿ ನಮ್ಮದೇನೂ ಪಾತ್ರ ಇರಲಿಲ್ಲ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರನ್ನು ದೂರಿದ ಅಧಿಕಾರಿಗಳು ಪ್ರಶ್ನೆಯಲ್ಲಿ ತಪ್ಪೇನಿಲ್ಲ ಆದರೆ ಕೈಗೊಂಬೆ ಎಂಬ ಪದ ಬಳಕೆಆಕ್ಷೇಪಾರ್ಹ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.