ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂ ಕೋರ್ಟ್, ತನ್ನ ಆವರಣದಲ್ಲಿ ವಕೀಲರು, ಮಾಧ್ಯಮದವರು, ಅರ್ಜಿದಾರರು ಸೇರಿದಂತೆ ಇತರರಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಿದೆ.
‘ಸುಪ್ರೀಂ ಕೋರ್ಟಿನ ಮೊದಲ ಐದು ನ್ಯಾಯಾಲಯಗಳ ಕೊಠಡಿಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದ್ದು, ಕೋರ್ಟ್ ಹಾಲ್‌ಗಳಲ್ಲಿ ಕಾನೂನು ಪುಸ್ತಕಗಳಾಗಲಿ, ಪತ್ರಿಕೆಗಳಾಗಲಿ ಇರುವುದಿಲ್ಲ. ಇನ್ನು ಮುಂದೆ ನಾವು ಪುಸ್ತಕಗಳನ್ನು ಅವಲಂಬಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಸೋಮವಾರ ಘೋಷಿಸಿದ್ದಾರೆ.
ಈ ಸೌಲಭ್ಯವು ಜುಲೈ 3ರಿಂದ ಜಾರಿಗೆ ಬಂದಿದ್ದು, ಸುಪ್ರೀಂ ಕೋರ್ಟ್‌ನ ಆವರಣ, ಮುಂಭಾಗದ ಕ್ಯಾಂಟೀನ್, ಮಾಧ್ಯಮ ಗ್ಯಾಲರಿ ಸೇರಿದಂತೆ ಮುಖ್ಯ ನ್ಯಾಯಮೂರ್ತಿಗಳ ಕೊಠಡಿ ಹಾಗೂ ನ್ಯಾಯಾಲಯಗಳ ಕೊಠಡಿ ಸಂಖ್ಯೆ 2ರಿಂದ 5ರವರೆಗೆ ಈ ಸೌಲಭ್ಯ ಲಭ್ಯವಿರುತ್ತದೆ.
ಬಳಕೆದಾರರು 'SCI WiFi’ಗೆ ಲಾಗಿನ್ ಆಗಿ, ತಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಬಳಿಕ ಮೊಬೈಲ್‌ಗೆ ಬರುವ ಒಟಿಪಿಯನ್ನು ದಾಖಲಿಸಿ ಉಚಿತ ವೈಫೈ ಸೌಕರ್ಯ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.