ADVERTISEMENT

ಜು.29ರಿಂದ ಆ.3ರವರೆಗೆ ವಿಶೇಷ ಲೋಕ್‌ ಅದಾಲತ್‌: ಭಾಗವಹಿಸಲು ಜನರಲ್ಲಿ ಸಿಜೆಐ ಮನವಿ

ಪಿಟಿಐ
Published 5 ಜುಲೈ 2024, 15:55 IST
Last Updated 5 ಜುಲೈ 2024, 15:55 IST
<div class="paragraphs"><p>ಸಿಜೆಐ ಡಿ.ವೈ ಚಂದ್ರಚೂಡ್</p></div>

ಸಿಜೆಐ ಡಿ.ವೈ ಚಂದ್ರಚೂಡ್

   

ಪಿಟಿಐ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳು ಬಾಕಿ ಉಳಿಸಿಕೊಂಡಿರುವವರು ಜುಲೈ 29ರಿಂದ ಆಗಸ್ಟ್‌ 3ರವರೆಗೆ ನಡೆಯುವ ವಿಶೇಷ ‘ಲೋಕ್‌ ಅದಾಲತ್‌’ನಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಶುಕ್ರವಾರ ವಿಡಿಯೊ ಸಂದೇಶದ ಮೂಲಕ ಕರೆ ನೀಡಿದ್ದಾರೆ.‌

ADVERTISEMENT

ಸಿಜೆಐ ಅವರ ಸಂದೇಶವನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ‘ಸುಪ್ರೀಂ ಕೋರ್ಟ್‌ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ. ಭಾರಿ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದು ನ್ಯಾಯಮೂರ್ತಿಗಳಲ್ಲಿ ಕಳವಳ ಉಂಟುಮಾಡಿದೆ’ ಎಂದು ಅವರು ಹೇಳಿದ್ದಾರೆ.

‘ಲೋಕ್‌ ಅದಾಲತ್‌ ತಂತ್ರಜ್ಞಾನ ಆಧರಿತ ಮತ್ತು ಅನೌಪಚಾರಿಕವಾಗಿ ಪರಿಹಾರ ಒದಗಿಸುವ ಕಾರ್ಯಕ್ರಮವಾಗಿರುತ್ತದೆ. ನಾಗರಿಕರು ಸ್ವಇಚ್ಛೆಯಿಂದ ಭಾಗವಹಿಸಬಹುದು. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ನನ್ನ ಸಹೋದ್ಯೋಗಿಗಳು ಮತ್ತು ಸುಪ್ರೀಂ ಕೋರ್ಟ್‌ ಸಿಬ್ಬಂದಿ ಪರವಾಗಿ ಜನರಲ್ಲಿ ಮನವಿ ಮಾಡುತ್ತಿದ್ದೇನೆ’ ಎಂದು ಚಂದ್ರಚೂಡ್‌ ಅವರು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.