ನವದೆಹಲಿ: ಪಕ್ಷಕ್ಕೆ ನೀಡಿರುವ ‘ಗಡಿಯಾರ’ದ ಚಿಹ್ನೆಯ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂಬುದನ್ನು ದಿನಪತ್ರಿಕೆಗಳ ಮೂಲಕ ಜನರಿಗೆ ತಿಳಿಸಬೇಕು ಎಂದು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚನೆ ನೀಡಿದೆ.
ಕೋರ್ಟ್ ಆದೇಶ ಬಂದ 36 ಗಂಟೆಗಳಲ್ಲಿ ಈ ಬಗ್ಗೆ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡಬೇಕು, ಮರಾಠಿ ಪತ್ರಿಕೆಗಳಲ್ಲಿಯೂ ಈ ಪ್ರಕಟಣೆ ಇರಬೇಕು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಾಂಕರ್ ದತ್ತ ಮತ್ತು ಉಜ್ವಲ್ ಭೂಯಾನ್ ಅವರು ಇರುವ ಪೀಠವು ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಬಣಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
‘ನೀವು ನಿಮ್ಮ ಶಕ್ತಿಯನ್ನು ಕೋರ್ಟ್‌ನಲ್ಲಿ ವ್ಯರ್ಥ ಮಾಡಬೇಡಿ. ಮತದಾರರ ಬಳಿ ಹೋಗಿ, ಅವರ ಮನ ಒಲಿಸುವ ಕೆಲಸ ಮಾಡಿ’ ಎಂದು ಪೀಠವು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.