ADVERTISEMENT

ಜನರನ್ನು ವಂಚಿಸಲು ಸಿಎಂ ನಾಯ್ಡು ಅವರಿಂದ ಹಲವು ಅವತಾರ: ಜಗನ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 5:18 IST
Last Updated 11 ನವೆಂಬರ್ 2024, 5:18 IST
<div class="paragraphs"><p>ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು</p></div>

ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು

   

ಅಮರಾವತಿ: ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಜನರನ್ನು ವಂಚಿಸುವ ಸಲುವಾಗಿ ಹಲವು ಅವತಾರಗಳನ್ನು ತಾಳಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಆರೋಪಿಸಿದ್ದಾರೆ.

ಮೊಬೈಲ್‌ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ತಾವೇ ಆವಿಷ್ಕರಿಸಿದ್ದಾಗಿ ನಾಯ್ಡು ಅವರು ಎರಡು ದಶಕಗಳಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಎಕ್ಸ್‌/ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಜಗನ್‌, 'ಚಂದ್ರಬಾಬು ನಾಯ್ಡು ಅವರು ಜನರನ್ನು ವಂಚಿಸುವುದಕ್ಕಾಗಿ ಕಣ್ಣಿಗೆ ಕಟ್ಟುವಂತೆ ತಂತ್ರಗಳನ್ನು ಮಾಡಲಿದ್ದಾರೆ. ಆ ನಿಟ್ಟಿನಲ್ಲಿ ಹಲವು ಅವತಾರಗಳನ್ನು ಧರಿಸಲಿದ್ದಾರೆ. ಇತ್ತೀಚೆಗಿನ ಶ್ರೀಶೈಲಂ ಸೀ–ಪ್ಲೇನ್‌ ಭೇಟಿಯೂ ಅಂತಹದೇ ತಂತ್ರವಾಗಿತ್ತು' ಎಂದು ಹೇಳಿದ್ದಾರೆ.‌

ಜಗನ್‌ ಪ್ರಕಾರ, 114 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಸೀ–ಪ್ಲೇನ್‌ ಯೋಜನೆಯಲ್ಲಿ ಹೊಸದೇನೂ ಇಲ್ಲ. ಭಾರತದಲ್ಲಿ ಕೇರಳವು ಮೊದಲ ಬಾರಿಗೆ ಸೀ–ಪ್ಲೇನ್‌ ಕಾರ್ಯಾಚರಣೆಯನ್ನು 2013ರಲ್ಲಿ ಆರಂಭಿಸಿತ್ತು. ಆದರೆ, ನಂತರ ಸ್ಥಗಿತಗೊಳಿಸಿತು. ಅದೇ ರೀತಿ, ಗುಜರಾತ್ ಸಹ 2020ರಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿ ಹಿಂಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.