ADVERTISEMENT

ಕೋಚಿಂಗ್‌ ಸೆಂಟರ್‌ ಅವಘಡ: ಸಿಬಿಐಗೆ ದೆಹಲಿ ಹೈಕೋರ್ಟ್‌ ನೋಟಿಸ್‌

ಪಿಟಿಐ
Published 7 ಆಗಸ್ಟ್ 2024, 16:29 IST
Last Updated 7 ಆಗಸ್ಟ್ 2024, 16:29 IST
...
...   

ನವದೆಹಲಿ : ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ವೊಂದರ ನೆಲಮಹಡಿಗೆ ನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ, ನೆಲಮಹಡಿಯ ನಾಲ್ವರು ಸಹ ಮಾಲೀಕರ ಜಾಮೀನು ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಸಿಬಿಐಗೆ ನೋಟಿಸ್‌ ನೀಡಿದೆ.

ಆಗಸ್ಟ್‌ 9ರ ಒಳಗಾಗಿ ಉತ್ತರಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಜು ಬಜಾಜ್‌ ಚಂದನಾ ಅವರು ಆದೇಶಿಸಿದ್ದಾರೆ.

‘ಪ್ರಕರಣದ ಎಫ್‌ಐಆರ್ ಪ್ರತಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ. ಹಾಗಾಗಿ ಜಾಮೀನಿನಿ ಬಗ್ಗೆ ನಿರ್ಧರಿಸಲಾಗದು’ ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣವನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವ ಕಾರ್ಯ ಪೂರ್ಣಗೊಂಡಿಲ್ಲ ಮತ್ತು ಸಿಬಿಐ ಈವರೆಗೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ಕಾರಣ ಸಿಬಿಐಗೆ ನೋಟಿಸ್‌ ಜಾರಿಯಾಗಿದೆ.

ADVERTISEMENT

ಜುಲೈ 27ರಂದು ದೆಹಲಿಯ ಹಳೆ ರಾಜೀಂದರ್‌ ನಗರದ ‘ರಾವ್ಸ್ ಸ್ಟಡಿ ಸರ್ಕಲ್’ನ ನೆಲಮಹಡಿಗೆ ನೀರು ನುಗ್ಗಿದ್ದ ಪರಿಣಾಮ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿದ್ದರು.

ಪ್ರಕರಣ ಸಂಬಂಧ ನೆಲಮಹಡಿಯ ಸಹಮಾಲೀಕರಾದ ಪರ್ವೀಂದರ್‌ ಸಿಂಗ್‌, ತಾಜಿಂದರ್‌ ಸಿಂಗ್, ಹರ್ವೀಂದರ್‌ ಸಿಂಗ್‌ ಮತ್ತು ಸರಬ್‌ಜೀತ್‌ ಸಿಂಗ್‌ ಅವರು ಬಂಧನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.