ADVERTISEMENT

ಕಲ್ಲಿದ್ದಲು ಹಗರಣ: ಶಿಕ್ಷೆಗೆ ತಡೆ ಕೋರಿದ್ದ ಮಧು ಕೋಡಾ ಅರ್ಜಿ ವಜಾ

ಚುನಾವಣೆಯಲ್ಲಿ ಸ್ಪರ್ಧಿಸುವ ಕನಸಿಗೆ ಹಿನ್ನಡೆ

ಪಿಟಿಐ
Published 18 ಅಕ್ಟೋಬರ್ 2024, 13:20 IST
Last Updated 18 ಅಕ್ಟೋಬರ್ 2024, 13:20 IST
ಮಧು ಕೋಡಾ
ಮಧು ಕೋಡಾ   

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ವಿಧಿಸಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಶಿಕ್ಷೆಗೆ ತಡೆ ನೀಡಿ, ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿ ನೀನಾ ಬನ್ಸಲ್‌ ಕೃಷ್ಣ ಅವರು ನಿರಾಕರಿಸಿದ್ದಾರೆ.

ಜಾರ್ಖಂಡ್‌ನಲ್ಲಿನ ಕಲ್ಲಿದ್ದಲು ನಿಕ್ಷೇಪವೊಂದನ್ನು ಕೋಲ್ಕತ್ತ ಮೂಲದ ವಿನಿ ಐರನ್‌ ಆ್ಯಂಡ್‌ ಸ್ಟೀಲ್ ಉದ್ಯೋಗ್‌ ಲಿಮಿಟೆಡ್‌ಗೆ(ವಿಐಎಸ್‌ಯುಎಲ್‌) ದೊರಕಿಸಿಕೊಡಲು ಭ್ರಷ್ಟಾಚಾರ ಮತ್ತು ಸಂಚು ನಡೆಸಿರುವುದು ಸಾಬೀತಾಗಿತ್ತು. ಈ ಪ್ರಕರಣದಲ್ಲಿ ಮಧು ಕೋಡಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್‌.ಸಿ.ಗುಪ್ತಾ, ಜಾರ್ಖಂಡ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ. ಬಸು ಮತ್ತು ಕೋಡಾ ಆಪ್ತ ವಿಜಯ್‌ ಜೋಶಿಗೆ ವಿಚಾರಣಾ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ADVERTISEMENT

ವಿಐಎಸ್‌ಯುಎಲ್‌ಗೆ ₹50 ಲಕ್ಷ, ಕೋಡಾಗೆ ₹25 ಲಕ್ಷ ಮತ್ತು ಬಸು ಹಾಗೂ ಗುಪ್ತಾಗೆ ತಲಾ 1 ಲಕ್ಷ ದಂಡ ವಿಧಿಸಲಾಗಿತ್ತು.

ಮೇಲ್ಮನವಿಯು ವಿಚಾರಣೆಯಲ್ಲಿರುವಾಗ ಅಪರಾಧಿಗಳಿಗೆ ಜಾಮೀನು ದೊರೆತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.