ADVERTISEMENT

ಹಡಗಿನಲ್ಲಿ ಚೀನಾ ಪ್ರಜೆಗೆ ಹೃದಯಾಘಾತ: ಭಾರತೀಯ ಕರಾವಳಿ ಕಾವಲು ಪಡೆ ತುರ್ತುಸ್ಪಂದನೆ

ಪಿಟಿಐ
Published 17 ಆಗಸ್ಟ್ 2023, 15:37 IST
Last Updated 17 ಆಗಸ್ಟ್ 2023, 15:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮುಂಬೈನಿಂದ 200 ಕಿ.ಮೀ.ದೂರದಲ್ಲಿ ಅರಬ್ಬಿ ಸಮುದ್ರದಲ್ಲಿದ್ದ  ಹಡಗಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಚೀನಾದ ಪ್ರಜೆಯೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೆರವು ನೀಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಯಶಸ್ವಿಯಾಗಿದೆ.

ಆಗಸ್ಟ್ 16–17ರ ನಡುವಿನ ಮಧ್ಯರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ಚೀನಾದಿಂದ ಯುಎಇಗೆ ತೆರಳುತ್ತಿದ್ದ ಎಂ.ವಿ.ಡೊಂಗ್ ಫಾಂಗ್‌ಕನ್ ಟನ್‌ ನಂ. 2 ಹಡಗಿನಲ್ಲಿದ್ದ ಚೀನಾದ ಪ್ರಜೆ ಯಿನ್‌ ವೆಗ್ಯಾಂಗ್‌ ಅವರಿಗೆ ಹೃದಯಾಘಾತವಾಗಿತ್ತು. ಮಾಹಿತಿ ಸಿಕ್ಕಿದ ಕೂಡಲೇ ಪ್ರತಿಕೂಲ ವಾತಾವರಣದಲ್ಲಿಯೂ ರಕ್ಷಣಾ ಕಾರ್ಯಾಚರಣೆ ನಡೆಯಿತು ಎಂದು ಕಾವಲು ಪಡೆ ತಿಳಿಸಿದೆ.

ರೋಗಿಯನ್ನು ಎಂಕೆ–III ವಿಮಾನ ಬಳಸಿ ಕರೆತಂದಿದ್ದು, ಪ್ರಾಥಮಿಕ ಚಿಕಿತ್ಸೆ ಒದಗಿಸಲಾಯಿತು. ಚೇತರಿಕೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಡಗಿನ ಮೇಲ್ವಿಚಾರಕರಿಗೆ ಒಪ್ಪಿಸಲಾಯಿತು. ಇದು, ಕಾವಲು ಪಡೆಯ ಬದ್ಧತೆಗೆ ನಿದರ್ಶನವಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.