ಚೆನ್ನೈ: ಪಶ್ಚಿಮ ಆಫ್ರಿಕಾದ ಘಾನಾದಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರೊಬ್ಬರಿಂದ ಸುಮಾರು ₹21 ಕೋಟಿ ಮೌಲ್ಯದ 2 ಕೆ.ಜಿಗೂ ಹೆಚ್ಚು ಪ್ರಮಾಣದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ ಇಲಾಖೆ ತಿಳಿಸಿದೆ.
ಜೂನ್ 26ರಂದು ಪಶ್ಚಿಮ ಆಫ್ರಿಕಾ ದೇಶದಿಂದ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯನ್ನು ಗುಪ್ತಚರ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದರು. ಈ ವೇಳೆ ಆಕೆಯ ಬ್ಯಾಗ್ ಮತ್ತು ಚಪ್ಪಲಿಯಲ್ಲಿ ಪುಡಿ ರೂಪದಲ್ಲಿರುವ ಮಾದಕ ವಸ್ತು ಪತ್ತೆಯಾಗಿದೆ ಎಂದು ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ ಎಂದು ಚೆನ್ನೈ ಕಸ್ಟಮ್ ವಲಯದ ಮುಖ್ಯ ಆಯುಕ್ತ ಆರ್. ಶ್ರೀನಿವಾಸ್ ನಾಯಕ್ ತಿಳಿಸಿದ್ದಾರೆ.
ಬಂಧಿತ ಮಹಿಳೆಯಿಂದ 2095 ಗ್ರಾಮ್ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಪುಝಲ್ ಕೇಂದ್ರ ಕಾರಾಗೃಹದಲ್ಲಿ ಆಕೆಯನ್ನು ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.