ಭುವನೇಶ್ವರ; ಚಳಿಗಾಲದ ಆರಂಭದಲ್ಲೇ ಒಡಿಶಾದಲ್ಲಿ ಶೀತ ಗಾಳಿತೀವ್ರಗೊಂಡಿದೆ. ಕಂಧಮಾಲ್ ಜಿಲ್ಲೆಯ ಜಿ. ಉದಯಗಿರಿಯಲ್ಲಿ ಕನಿಷ್ಠ ತಾಪಮಾನ 7.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಎರಡು ಕಡೆ 10 ಡಿಗ್ರಿಗೂ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಿದೆ. ಕೊರಾಪುಟ್ ಜಿಲ್ಲೆಯ ಸಿಮಿಲಿಗುಡದಲ್ಲಿ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಒಡಿಶಾದ 20 ಪ್ರದೇಶಗಳಲ್ಲಿ 15 ಡಿಗ್ರಿಗೂ ಕಡಿಮೆ ಕನಿಷ್ಠ ತಾಪಮಾನ ವರದಿಯಾಗಿದೆ. ಕಂಧಮಾಲ್ ಜಿಲ್ಲೆಯ ಫುಲ್ಬನಿಯಲ್ಲಿ 10.5, ದರಿಗ್ಬಾಡಿ ಮತ್ತು ಭವಾನಿಪಟ್ಟಣದಲ್ಲಿ 11 ಡಿಗ್ರಿ ದಾಖಲಾಗಿದೆ.
ಉಳಿದಂತೆ ಸುಂದರ್‌ಗರ್‌ನ ಕಿರೆಯ್‌ನಲ್ಲಿ 11.5, ಸಂಲ್‌ಪುರದ ಚಿಪ್ಲಿಮಾದಲ್ಲಿ 12, ಝಾರ್ಸುಗಡದಲ್ಲಿ 12.6, ಕೆಂಜೋರ್‌ನಲ್ಲಿ 13 ಮತ್ತು ಬರ್‌ಗರ್‌ನಲ್ಲಿ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಅವಳಿ ನಗರಗಳಾದ ಭುವನೇಶ್ವರ್ ಮತ್ತು ಕಟಕ್‌ನಲ್ಲಿಯೂ ತಾಪಮಾನ ಕುಸಿದಿದ್ದು, ಕ್ರಮವಾಗಿ 16 ಮತ್ತು 16.4 ಡಿಗ್ರಿ ದಾಖಲಾಗಿದೆ. ಎರಡೂ ಕಡೆ ಕ್ರಮವಾಗಿ 3.6 ಡಿಗ್ರಿ ಮತ್ತು 2.2 ಡಿಗ್ರಿಯಷ್ಟು ತಾಪಮಾನ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.