ADVERTISEMENT

ದೆಹಲಿಯಲ್ಲಿ ವಿಪರೀತ ಚಳಿ: ಶಾಲೆಗಳ ರಜೆ 12ರವರೆಗೆ ವಿಸ್ತರಣೆ

ಪಿಟಿಐ
Published 7 ಜನವರಿ 2024, 9:06 IST
Last Updated 7 ಜನವರಿ 2024, 9:06 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ಚಳಿಯ ಪ್ರಮಾಣ ತೀವ್ರವಾಗಿರುವುದರಿಂದ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ನೀಡಿರುವ ಚಳಿಗಾಲದ ರಜೆಯನ್ನು ಜನವರಿ 12ರವರೆಗೆ ವಿಸ್ತರಿಸಲಾಗಿದೆ ಎಂದು ದೆಹಲಿ ಶಿಕ್ಷಣ ಸಚಿವೆ ಆತಿಶಿ ತಿಳಿಸಿದ್ದಾರೆ.

‘ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮುಂದಿನ ಐದು ದಿನಗಳ ಕಾಲ ನರ್ಸರಿಯಿಂದ 5ನೇ ತರಗತಿವರೆಗಿನ ಮಕ್ಕಳನ್ನು ಶಾಲೆಗೆ ಕರೆಸುವಂತಿಲ್ಲ, ಸಾಧ್ಯವಾದರೆ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಬೇಕು’ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. 

ADVERTISEMENT

‘6ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಸೋಮವಾರದಿಂದ ತರಗತಿಗಳನ್ನು ಆರಂಭಿಸಬೇಕು. ಬೆಳಗ್ಗೆ 8 ಗಂಟೆಗೆ ಮುಂಚಿತವಾಗಿ ಮತ್ತು ಸಂಜೆ 5 ಗಂಟೆಯ ಬಳಿಕ ತರಗತಿ ನಡೆಸುವಂತಿಲ್ಲ’ ಎಂದು ಸೂಚನೆ ನೀಡಿದೆ.

ಜಮ್ಮುವಿನಲ್ಲೂ ಹೆಚ್ಚಿದ ಚಳಿ: ‘ಜಮ್ಮು‌ವಿನಲ್ಲಿ 3.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಈ ವರ್ಷ ರಾತ್ರಿಯಲ್ಲಿ ದಾಖಾಲಾದ ಅತಿ ಕಡಿಮೆ ತಾಪಮಾನ ಇದಾಗಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಟ್ಟ ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. 

ರಾಜಸ್ತಾನದಲ್ಲಿ ಕಡಿಮೆಯಾಗದ ಚಳಿ: ರಾಜಸ್ತಾನದ ಹಲವು ಭಾಗಗಳಲ್ಲಿ ಮಂಜು ಕವಿದ ವಾತಾವರಣವಿದ್ದು, ಅತೀ ಶೀತ ಪ್ರದೇಶವಾದ ಆಲ್ವಾರ್‌ನಲ್ಲಿ 3.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.