ADVERTISEMENT

ಕೋಲ್ಡ್‌ಪ್ಲೇ | ಟಿಕೆಟ್ ಬುಕ್ಕಿಂಗ್ ಹಗರಣ: ಬುಕ್‌ಮೈ ಶೋ ವಿರುದ್ಧ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2024, 5:53 IST
Last Updated 27 ಸೆಪ್ಟೆಂಬರ್ 2024, 5:53 IST
<div class="paragraphs"><p>ಕೋಲ್ಡ್‌ಪ್ಲೇ ಗಾಯಕ ಕ್ರಿಸ್ ಮಾರ್ಟಿನ್</p></div>

ಕೋಲ್ಡ್‌ಪ್ಲೇ ಗಾಯಕ ಕ್ರಿಸ್ ಮಾರ್ಟಿನ್

   

–ರಾಯಿಟರ್ಸ್ ಚಿತ್ರ

ಮುಂಬೈ: ಅತಿ ಬೇಡಿಕೆಯ ‘ಕೋಲ್ಡ್‌ಪ್ಲೇ’ ಕಾರ್ಯಕ್ರಮಕ್ಕಾಗಿ ಯಥಾರ್ಥ ಟಿಕೆಟ್ ಖರೀದಿದಾರರನ್ನು ಕಡೆಗಣಿಸಿರುವ ಬುಕ್‌ಮೈ ಶೋ, ಲೈವ್‌ ನ್ಯಾಷನಲ್‌ ಎಂಟರ್‌ಟೈನ್‌ಮೆಂಟ್‌ ಬ್ಲ್ಯಾಕ್‌ ಟಿಕೆಟ್‌ ಮಾರುಕಟ್ಟೆಗೆ ಅನುವು ಮಾಡಿಕೊಟ್ಟಿವೆ ಎಂಬ ಆರೋಪ ಕೇಳಿಬಂದಿದೆ.

ADVERTISEMENT

2025ರ ಜನವರಿ 18, 19, 21ರಂದು ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಕೋಲ್ಡ್‌ಪ್ಲೇ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರುಕಟ್ಟೆಗೆ ಅನುವು ಮಾಡಿಕೊಟ್ಟ ಆರೋಪದಡಿ ಬುಕ್‌ಮೈಶೋ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ‘ಬಾರ್ ಅಂಡ್‌ ಬೆಂಚ್‌’ ವರದಿ ಮಾಡಿದೆ.

ಕೋಲ್ಡ್‌ಪ್ಲೇ ಸಂಗೀತ ಕಾರ್ಯಕ್ರಮಕ್ಕೆ ಬುಕ್‌ಮೈ ಶೋ ಅಧಿಕೃತ ಟಿಕೆಟಿಂಗ್ ಪಾಲುದಾರ ಸಂಸ್ಥೆಯಾಗಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್‌ಗಳು ಮಾರಾಟವಾದ ತಕ್ಷಣ, ಅವುಗಳು ಹೆಚ್ಚಿನ ಬೆಲೆಗೆ Viagogo ನಂತಹ ಸೈಟ್‌ಗಳಲ್ಲಿ ಮರು ಮಾರಾಟಕ್ಕೆ ಕಾಣಿಸಿಕೊಂಡಿವೆ ಎಂದು ವಕೀಲರು ಹೇಳಿದ್ದಾರೆ.

ಕೋಲ್ಡ್‌ಪ್ಲೇ ಸಂಗೀತ ಕಾರ್ಯಕ್ರಮದ ನಕಲಿ ಟಿಕೆಟ್‌ಗಳನ್ನು ಇತರೆ ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬುಕ್‌ಮೈ ಶೋ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಕೋಲ್ಡ್‌ಪ್ಲೇ ಕಾರ್ಯಕ್ರಮ ಕುರಿತು ಯಾವುದೇ ಟಿಕೆಟ್ ಮಾರಾಟ ಅಥವಾ ಮರು ಮಾರಾಟ ಪ್ಲಾಟ್‌ಫಾರ್ಮ್‌ಗಳಾದ Viagogo ಮತ್ತು Gigsberg ಅಥವಾ ಥರ್ಡ್‌ ಪಾರ್ಟಿಗಳೊಂದಿಗೆ ವ್ಯವಹಾರ ನಡೆಸಿಲ್ಲ ಎಂದು ಬುಕ್‌ಮೈ ಶೋ ಪ್ರಕಟಣೆಯಲ್ಲಿ ತಿಳಿಸಿದೆ.

ಕೋಲ್ಡ್‌ಪ್ಲೇ ಗಾಯಕರ ತಂಡ ಎಂಟು ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಕ್ರಮ ನಡೆಸಿಕೊಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.