ತಿರುವನಂತಪುರ: ಕೇರಳದ ಪ್ರತಿಷ್ಠಿತ ಶಾಲಾ ಯುವ ಉತ್ಸವದ ಮೇಲೆ ಕೋಮುವಾದದ ಕರಿನೆರಳು ಆವರಿಸಿದೆ. ಏಷ್ಯಾದ ಅತಿ ದೊಡ್ಡ ಶಾಲಾ ಉತ್ಸವಕ್ಕೆ ಶನಿವಾರ ತೆರೆಬಿದ್ದಿದೆ. ಆದರೆ ಇದನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗುತ್ತಿರುವ ಕೋಮುವಾದಿ ಅಭಿಯಾನಗಳು ಮುಂದುವರಿದಿವೆ.
ಕಲೋತ್ಸವದಲ್ಲಿ ಸಸ್ಯಾಹಾರವನ್ನೇ ಪೂರೈಸುವ ಮೂಲಕ ಬ್ರಾಹ್ಮಣರ ಪ್ರಾಬಲ್ಯ ಮುಂದುವರಿಸಲಾಗಿದೆ ಎಂದು ಕೆಲವರು ಅಭಿಯಾನ ಕೈಗೊಂಡಿದ್ದು, ಇದರಿಂದ ಮನನೊಂದಿರುವ ಪಾಕ ಪ್ರವೀಣ ಪಳಯಿಡಂ ಮೋಹನನ್ ನಂಬೂಧರಿ ಅವರು ಇನ್ನು ಮುಂದೆ ಕಲೋತ್ಸವದ ಅಡುಗೆ ಗುತ್ತಿಗೆ ಪಡೆಯದಿರಲು ತೀರ್ಮಾನಿಸಿದ್ದಾರೆ. ಹಿಂದಿನ 16 ವರ್ಷಗಳಿಂದ ಸತತವಾಗಿ ಅವರು ಅಡುಗೆ ಗುತ್ತಿಗೆ ಪಡೆದಿದ್ದರು.
ಕಲೋತ್ಸವದ ಉದ್ಘಾಟನೆ ವೇಳೆ ಪ್ರದರ್ಶನಗೊಂಡಿದ್ದ ನಾಟಕದಲ್ಲಿ ಮುಸ್ಲಿಂ ಸಮುದಾಯದ ಉಡುಪು ತೊಟ್ಟಿದ್ದ ವಿದ್ಯಾರ್ಥಿಯನ್ನು ಭಯೋತ್ಪಾದಕನೆಂದು ಬಿಂಬಿಸಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ಕೇರಳದ ಪ್ರವಾಸೋದ್ಯಮ ಸಚಿವ ಪಿ.ಎ.ಮೊಹಮ್ಮದ್ ರಿಯಾಸ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.