ನವದೆಹಲಿ: ಆರೋಗ್ಯ ಕ್ಷೇತ್ರವನ್ನು ಬಿಜೆಪಿಯು ಕೆಟ್ಟದಾಗಿ ನಿರ್ವಹಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ವೈಫಲ್ಯಗಳಲ್ಲಿ ಒಂದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಆರೋಗ್ಯ ಕ್ಷೇತ್ರವನ್ನು ಕೆಟ್ಟದಾಗಿ ನಿರ್ವಹಣೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷದ ಅನ್ಯಾಯ ಕಾಲದ ವೈಫಲ್ಯಗಳ ಪಟ್ಟಿಯಲ್ಲಿ ಒಂದು. ಜೂನ್ 4ರಂದು ಭಾರತೀಯರು ಕಾಂಗ್ರೆಸ್‌ನ ಆರೋಗ್ಯದ ಹಕ್ಕು ಪಡೆಯುವುದನ್ನು ಖಾತರಿ ಪಡಿಸಿಕೊಳ್ಳಬಹುದು’ ಎಂದು ಬರೆದುಕೊಂಡಿದ್ದಾರೆ.
ಶೇ 18ರ ಜಿಎಸ್‌ಟಿ ವ್ಯಾಪ್ತಿಗೆ ಆರೋಗ್ಯ ವಿಮೆಯನ್ನೂ ಒಳಪಡಿಸಿರುವುದರ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ. ಶೇ 63ರಷ್ಟು ಭಾರತೀಯರಿಗೆ ಆರೋಗ್ಯ ವಿಮೆ ಇಲ್ಲ ಎಂದು ಉಲ್ಲೇಖಿಸಿದ್ದಾರೆ.
‘ಆರೋಗ್ಯ ವಿಮೆಗೆ ಮೋದಿ ಸರ್ಕಾರ ಶೇ 18ರಷ್ಟು ಜಿಎಸ್‌ಟಿ ವಿಧಿಸಿದೆ. ವಿಮಾ ಪ್ರಿಮಿಯಂಗಳು 4 ಪಟ್ಟು ಏರಿಕೆಯಾಗಿವೆ. ವೈದ್ಯಕೀಯ ವೆಚ್ಚ ಶೇ 18–20ರಷ್ಟು ಏರಿಕೆಯಾಗಿವೆ’ ಎಂದು ಅವರು ವರದಿಯೊಂದನ್ನು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.