ADVERTISEMENT

ಏ.1ರಿಂದ ಪುರಿ ಜಗನ್ನಾಥ ದೇವಾಲಯ ಪ್ಲಾಸ್ಟಿಕ್ ಮುಕ್ತ

ಪಿಟಿಐ
Published 5 ಮಾರ್ಚ್ 2020, 2:01 IST
Last Updated 5 ಮಾರ್ಚ್ 2020, 2:01 IST
   

ಪುರಿ (ಒಡಿಶಾ): ಏಪ್ರಿಲ್ 1ರಿಂದ ಪುರಿ ಜಗನ್ನಾಥ ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಲು ದೇವಾಲಯದ ಆಡಳಿತ ಮಂಡಳಿ (ಎಸ್‌ಜೆಟಿಎ) ಬುಧವಾರ ನಿರ್ಧರಿಸಿದೆ ಎಂದು ದೇವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇವಾಲಯದ ಆವರಣದೊಳಗೆ ಉಗುಳಿದರೆ ಈ ಹಿಂದೆ ಇದ್ದ ದಂಡವನ್ನು ಐದು ಪಟ್ಟು (₹ 500) ಹೆಚ್ಚಿಸಲು ಎಸ್‌ಜೆಟಿಎ ನಿರ್ಧರಿಸಿದೆ ಎಂದು ಆಡಳಿತಾಧಿಕಾರಿ ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಇನ್ನು ಮುಂದೆ ಎಲೆಗಳಲ್ಲಿ ಪ್ರಸಾದ ನೀಡಲಾಗುವುದು. ಇದರಿಂದ ದೇವಾಲಯದೊಳಗೆ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಆಡಳಿತ ಮಂಡಳಿ ಈ ಹಿಂದೆ ದೇವಾಲಯದ ಆವರಣದೊಳಗೆ ಗುಟ್ಕಾ, ಎಲೆ ಅಡಿಕೆ ಸೇವನೆಯನ್ನು ನಿಷೇಧಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.