ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಮೋದಿ ಭಾಷಣ, ನೇಪಾಳದಿಂದ ಟೊಮೆಟೊ ಆಮದು, ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡುವ ಹೊಸ ಮಸೂದೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
ನವದೆಹಲಿ: ‘ದೇಶದ ಜನರು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ದೇಶದ ಕೋಟ್ಯಂತರ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಾನು ಇಲ್ಲಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಪ್ರತಿಕ್ರಿಯಿಸಿದ ಅವರು, ‘ಜನರ ಆಶೀರ್ವಾದದೊಂದಿಗೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಎನ್‌ಡಿಎ ಮತ್ತು ಬಿಜೆಪಿಯನ್ನು ಮಹಾ ವಿಜಯದ ಮೂಲಕ ಮರಳಿ ಅಧಿಕಾರಕ್ಕೆ ತರಲು ನೀವು (ವಿರೋಧ ಪಕ್ಷಗಳು) ನಿರ್ಧರಿಸಿರುವುದನ್ನು ನಾನು ಇಂದು ನೋಡುತ್ತಿದ್ದೇನೆ’ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನಷ್ಟು ಓದಿ: ವಿಪಕ್ಷಗಳ ಅವಿಶ್ವಾಸ ನಮಗೆ ಅದೃಷ್ಟವೇ ಸರಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ
ನವದೆಹಲಿ: ದೇಶದಲ್ಲಿ ಟೊಮೆಟೊ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವ ಬೆನ್ನಲ್ಲೇ ನೇಪಾಳದಿಂದ ಟೊಮೆಟೊ ಆಮದಿಗೆ ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆಮದಾಗುವ ಮೊದಲ ಟೊಮೆಟೊ ಸರಕು ನಾಳೆ ವಾರಾಣಸಿ, ಲಖನೌ, ಕಾನ್ಪುರಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ.
ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ದರವು ಶೇಕಡ 1400ರಷ್ಟು ಏರಿಕೆ ಕಂಡಿದ್ದು, ಕಳೆದ ಮೂರು ತಿಂಗಳಿನಿಂದ ₹140 ಆಸುಪಾಸಿನಲ್ಲಿದೆ.
ಇನ್ನಷ್ಟು ಓದಿ: ಬೆಲೆ ಏರಿಕೆ: ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲು ನಿರ್ಧರಿಸಿದ ಕೇಂದ್ರ
ಪುಣೆ: ರಾಷ್ಟ್ರಪಿತನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿ, ಮಹಾರಾಷ್ಟ್ರದ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆಯ ಸಂಸ್ಥಾಪಕ ಸಂಭಾಜಿ ಭಿಡೆ ವಿರುದ್ಧ ಮಹಾತ್ಮ ಗಾಂಧೀಜಿಯ ಮರಿಮೊಮ್ಮಗ ತುಷಾರ್ ಗಾಂಧಿ ಗುರುವಾರ ಪುಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಓದಿ: ಸಂಭಾಜಿ ಭಿಡೆ ವಿರುದ್ಧ ದೂರು ದಾಖಲಿಸಿದ ಗಾಂಧೀಜಿ ಮರಿಮೊಮ್ಮಗ ತುಷಾರ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಮಣಿಪುರದ ವಿಷಯದ ಕುರಿತು ಚರ್ಚೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಒತ್ತಾಯಿಸಿದರು.
167ನೇ ನಿಯಮದ ಅಡಿಯಲ್ಲಿ ಚರ್ಚೆ ನಡೆಸಲು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಈ ವೇಳೆ ಸಭೆಯಲ್ಲಿ ಗದ್ದಲ ಉಂಟಾಯಿತು.
ಇದಕ್ಕೆ ಪ್ರತ್ಯುತ್ತರವಾಗಿ ಪ್ರಧಾನಿ ಮೇಲ್ಮನೆಗೆ ಬಂದರೆ ಏನಾಗುತ್ತದೆ? ಅವರು ಪರಮಾತ್ಮನಲ್ಲ ಎಂದು ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ಓದಿ: ಪ್ರಧಾನಿ ಮೋದಿ 'ಪರಮಾತ್ಮ'ನಲ್ಲ: ರಾಜ್ಯಸಭೆಯಲ್ಲಿ ಖರ್ಗೆ
ಗುವಾಹಟಿ: ಸಂಘರ್ಷ ಪೀಡಿತ ರಾಜ್ಯದಲ್ಲಿ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳೀಯ ಜನರಿಗೆ ಧೈರ್ಯ ತುಂಬುವ ಸಲುವಾಗಿ ಮಣಿಪುರದಲ್ಲಿ ಶೀಘ್ರ ಎನ್‌ಆರ್‌ಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಣಿಪುರದ ಆಡಳಿತಾರೂಢ ಬಿಜೆಪಿಯ 40 ಶಾಸಕರು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪತ್ರ ಬರೆದಿದ್ದಾರೆ.
ಇನ್ನಷ್ಟು ಓದಿ: ಮಣಿಪುರದಲ್ಲಿ ಎನ್‌ಆರ್‌ಸಿ ಜಾರಿಗೆ ಒತ್ತಾಯ: ಪ್ರಧಾನಿಗೆ ಬಿಜೆಪಿ ಶಾಸಕರ ಪತ್ರ
ಇಂಫಾಲ್: ಚುರಚಂದ್‌ಪುರದಲ್ಲಿ ಮೇ 3ರಂದು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿ ಮೈತೇಯಿ ಸಮುದಾಯದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಬಿಷ್ಣುಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನಷ್ಟು ಓದಿ: ಕುಕಿ ಸಮುದಾಯದವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮೈತೇಯಿ ಮಹಿಳೆ: FIR ದಾಖಲು
ನವದೆಹಲಿ: ಭವಿಷ್ಯದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡಲು ಮಸೂದೆಯೊಂದನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದೆ.
ಇನ್ನಷ್ಟು ಓದಿ: ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡನೆಗೆ ಮುಂದಾದ ಕೇಂದ್ರ
ಹೈದರಾಬಾದ್: ಟಿಕೆಟ್ ರಹಿತ ಪ್ರಯಾಣಿಕನೊಬ್ಬನು ವಂದೇ ಭಾರತ್ ರೈಲಿನ ಶೌಚಾಲಯದೊಳಗೆ ಸಿಗರೇಟ್ ಹಚ್ಚಿದ ಪರಿಣಾಮ ರೈಲಿನಲ್ಲಿ ಮೊಳಗಿದ ಅಗ್ನಿಶಾಮಕ ಎಚ್ಚರಿಕೆ ಘಂಟೆ (ಫೈರ್ ಅಲರಾಂ) ಇಡೀ ರೈಲಿನಲ್ಲಿ ಆತಂಕ ಸೃಷ್ಟಿ ಮಾಡಿದೆ.
ಇನ್ನಷ್ಟು ಓದಿ: ಟಿಕೆಟ್ ರಹಿತ ಪ್ರಯಾಣಿಕನ ಸಿಗರೇಟ್ ಚಟಕ್ಕೆ ನಿಂತ ವಂದೇ ಭಾರತ್ ರೈಲು
ನವದೆಹಲಿ: ಲೋಸಕಭೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸಚೇತಕ ಮಾಣಿಕಂ ಟಾಗೋರ್ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಕ್ಕು ಚ್ಯುತಿ ನೋಟಿಸ್ ನೀಡಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ಚರ್ಚೆಯ ಮೇಲೆ ಭಾಷಣ ಮಾಡುವಾಗ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ
ಇನ್ನಷ್ಟು ಓದಿ: ಲೋಕಸಭೆಯಲ್ಲಿ ತಪ್ಪು ಮಾಹಿತಿ ಆರೋಪ: ಶಾ ವಿರುದ್ಧ ಹಕ್ಕು ಚ್ಯುತಿ ನೋಟಿಸ್
ನವದೆಹಲಿ: ಜಾಗತಿಕ ಆರ್ಥಿಕತೆಯು ಹಣದುಬ್ಬರ ಮತ್ತು ಬೆಳವಣಿಗೆ ಕುಂಠಿತ ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ಭಾರತವು ತನ್ನ ಭವಿಷ್ಯದ ಬೆಳವಣಿಗೆಯ ಬಗ್ಗೆ ಆಶಾವಾದಿ ಮತ್ತು ಸಕಾರಾತ್ಮಕತೆಯನ್ನು ಹೊಂದುವ ಮೂಲಕ ವಿಶಿಷ್ಟ ಸ್ಥಾನದಲ್ಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇನ್ನಷ್ಟು ಓದಿ: ಹಿಂದಿನ ಸರ್ಕಾರಗಳಿಂದ ಕನಸುಗಳ ಮಾರಾಟ, ಮೋದಿ ಸರ್ಕಾರದಿಂದ ಕನಸು ಈಡೇರಿಕೆ: ನಿರ್ಮಲಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.