ಮೊರೆನಾ: ಶಾಲೆಯೊಂದರ ಪ್ರಾಚಾರ್ಯರ (ಪ್ರಿನ್ಸಿಪಲ್) ಕೋಣೆಯಲ್ಲಿ ಕಾಂಡೋಮ್ ಪಾಕೆಟ್‌ಗಳು ಹಾಗೂ ವಿದೇಶಿ ಮಧ್ಯದ ಬಾಟಲ್‌ಗಳು ಸಿಕ್ಕಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಮೊರೆನಾ ಜಿಲ್ಲೆಯ ಖಾಸಗಿ ಆಂಗ್ಲ ಮಾಧ್ಯಮ ವಸತಿ ಶಾಲೆಯೊಂದಕ್ಕೆ ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ ಜಿಲ್ಲಾ ಶೈಕ್ಷಣಿಕ ಅಧಿಕಾರಿ ತಪಾಸಣೆಗಾಗಿ ಭೇಟಿ ನೀಡಿದ್ದರು.
ಈ ವೇಳೆ ಪ್ರಾಚಾರ್ಯರ ಮೇಲಿನ ಮಕ್ಕಳ ಖಾಸಗಿ ದೂರುಗಳನ್ನು ಪರಿಗಣಿಸಿ ತಪಾಸಣೆ ನಡೆಸಿದಾಗ ಕಾಂಡೋಮ್ ಪಾಕೆಟ್‌ಗಳು ಹಾಗೂ ವಿದೇಶಿ ಮಧ್ಯದ ಬಾಟಲ್‌ಗಳು ಸಿಕ್ಕಿವೆ.
ಇದರಿಂದ ಆಯೋಗದ ಮುಖ್ಯಸ್ಥರು ಶಾಲೆಯನ್ನು ಕೆಲ ದಿನ ಮುಚ್ಚುವಂತೆ ಆದೇಶಿಸಿದ್ದು, ಜಿಲ್ಲಾ ಶೈಕ್ಷಣಿಕ ಅಧಿಕಾರಿ ಅವರು ಆರೋಪಿತ ಪ್ರಾಚಾರ್ಯರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಏತನ್ಮಧ್ಯೆ ಪ್ರಾಚಾರ್ಯರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ನಾನು ಮದ್ಯಪಾನ ಮಾಡುವುದಿಲ್ಲ ಎಂದು ತಿಳಿಸಿರುವುದಾಗಿ ಐಎಎನ್‌ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.