ADVERTISEMENT

ನೀವು ರೈಲ್ವೆ ಸಚಿವರಾ, ರೀಲ್‌ ಸಚಿವರಾ? ಕಾಂಗ್ರೆಸ್‌ ಪ್ರಶ್ನೆ

‘ಕಾಂಚನ್‌ಜುಂಗಾ ಎಕ್ಸ್‌‌ಪ್ರೆಸ್‌ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಪಡಿಸಿದೆ.

ಪಿಟಿಐ
Published 18 ಜೂನ್ 2024, 14:57 IST
Last Updated 18 ಜೂನ್ 2024, 14:57 IST
<div class="paragraphs"><p>ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘಟನಾ ಸ್ಥಳಕ್ಕೆ ಬೈಕ್‌ನಲ್ಲೇ ತೆರಳಿದರು</p></div>

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘಟನಾ ಸ್ಥಳಕ್ಕೆ ಬೈಕ್‌ನಲ್ಲೇ ತೆರಳಿದರು

   

ಪಿಟಿಐ

ನವದೆಹಲಿ: ಕೇಂದ್ರ ಸರ್ಕಾರವು ರೈಲ್ವೆ ವ್ಯವಸ್ಥೆಯನ್ನು ‘ನಾಶಪಡಿಸಿದೆ’ ಎಂದು ಟೀಕಿಸಿರುವ ಕಾಂಗ್ರೆಸ್‌ ಪಕ್ಷ, ‘ಕಾಂಚನ್‌ಜುಂಗಾ ಎಕ್ಸ್‌‌ಪ್ರೆಸ್‌ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಪಡಿಸಿದೆ.

ADVERTISEMENT

ರೈಲ್ವೆ ಅಪಘಾತದ ಸ್ಥಳಕ್ಕೆ ಸಚಿವರು ಬೈಕ್‌ನಲ್ಲಿ ಹಿಂಬದಿ ಸವಾರರಾಗಿ ತೆರಳಿದ್ದರು ಎಂಬುದನ್ನು ಟೀಕಿಸಿರುವ ವಿರೋಧ ಪ‍ಕ್ಷವು, ‘ಅಶ್ವಿನಿ ವೈಷ್ಣವ್ ಅವರು ರೈಲ್ವೆ ಸಚಿವರಾ ಅಥವಾ ರೀಲ್ ಸಚಿವರಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ರೈಲು ಅಪಘಾತ ಸಂಭವಿಸಿದಾಗ ರೈಲ್ವೆ ಸಚಿವರು ಕ್ಯಾಮೆರಾ ಬೆಳಕಿನ ಜೊತೆಗೆ ಭೇಟಿ ನೀಡುತ್ತಾರೆ. ಎಲ್ಲವೂ ಸರಿಯಾಗಿದೆ ಎಂಬಂತೆ ಬಿಂಬಿಸುತ್ತಾರೆ. ನರೇಂದ್ರ ಮೋದಿಯವರೇ ಹೇಳಿ. ಇದರ ಹೊಣೆ ಯಾರು ಹೊರಬೇಕು. ರೈಲ್ವೆ ಸಚಿವರಾ ಅಥವಾ ನೀವಾ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.