ADVERTISEMENT

ಬಿಹಾರ ರಾಜಕೀಯ: ಭೂಪೇಶ್ ಬಘೇಲ್‌ರನ್ನು ವೀಕ್ಷಕರಾಗಿ ನೇಮಿಸಿದ ಕಾಂಗ್ರೆಸ್

ಪಿಟಿಐ
Published 27 ಜನವರಿ 2024, 10:09 IST
Last Updated 27 ಜನವರಿ 2024, 10:09 IST
ಭೂಪೇಶ್ ಬಘೇಲ್‌
ಭೂಪೇಶ್ ಬಘೇಲ್‌   

ನವದೆಹಲಿ: ಬಿಹಾರದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಮತ್ತು ಪಕ್ಷದ ಇತರ ಚಟುವಟಿಕೆಗಳ ನಡುವೆ ಸಮನ್ವಯ ಸಾಧಿಸಲು ಛತ್ತೀಸಗಢ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ಅವರನ್ನು ಹಿರಿಯ ವೀಕ್ಷಕರಾಗಿ ಕಾಂಗ್ರೆಸ್ ನೇಮಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ ಮತ್ತು ಪಕ್ಷದ ಇತರ ಚಟುವಟಿಕೆಗಳನ್ನು ಸಂಘಟಿಸಲು ಹಿರಿಯ ವೀಕ್ಷಕರಾಗಿ ಬಘೇಲ್‌ ಅವರನ್ನು ನೇಮಿಸಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್‌ ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ, ಜೆಡಿ(ಯು) ಅಧ್ಯಕ್ಷ ನಿತೀಶ್‌ ಕುಮಾರ್‌ ಅವರು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಬಹುದು ಎಂಬ ಬಲವಾದ ಸೂಚನೆಗಳು ಸಿಕ್ಕಿವೆ. ಬಿಹಾರದಲ್ಲಿ ಅಧಿಕಾರ ರಾಜಕಾರಣ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ನೇಮಕಾತಿ ನಡೆದಿದೆ.

ADVERTISEMENT

ಕಾಂಗ್ರೆಸ್‌ ನಾಯಕ ರಾಹುಲ್ ಗಾಂದಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯು ಸದ್ಯ ಎರಡು ದಿನಗಳ ವಿರಾಮವನ್ನು ತೆಗೆದುಕೊಂಡಿದೆ. ನಾಳೆ (ಭಾನುವಾರ) ಪಶ್ಚಿಮ ಬಂಗಾಳದ ಜಲ್ಪೈಗುರಿಯಿಂದ ಪುನರಾರಂಭವಾಗಲಿದೆ.

ಯಾತ್ರೆಯು ಜನವರಿ 29ರಂದು ಬಿಹಾರವನ್ನು ಪ್ರವೇಶಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.