ADVERTISEMENT

ಹರಿಯಾಣ ಚುನಾವಣೆ: ಕಾಂಗ್ರೆಸ್‌ ವೀಕ್ಷಕರಾಗಿ ಗೆಹಲೋತ್‌, ಮಾಕನ್‌, ಬಾಜ್ವಾ ನೇಮಕ 

ಪಿಟಿಐ
Published 14 ಸೆಪ್ಟೆಂಬರ್ 2024, 14:20 IST
Last Updated 14 ಸೆಪ್ಟೆಂಬರ್ 2024, 14:20 IST
   

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಎಐಸಿಸಿ ಹಿರಿಯ ವೀಕ್ಷಕರನ್ನಾಗಿ ಅಶೋಕ್ ಗೆಹಲೋತ್, ಅಜಯ್ ಮಾಕನ್ ಮತ್ತು ಪರತಾಪ್ ಸಿಂಗ್ ಬಾಜ್ವಾ ಅವರನ್ನು ಕಾಂಗ್ರೆಸ್ ಶನಿವಾರ ನೇಮಿಸಿದೆ. 

ಈ ನೇಮಕಾತಿಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ಮಾಕೆನ್ ಪಕ್ಷದ ಖಜಾಂಚಿಯಾಗಿದ್ದರೆ, ಅಶೋಕ್‌ ಗೆಹಲೋತ್ ರಾಜಸ್ಥಾನದಲ್ಲಿ ಮುಖ್ಯಮಂತ್ರಿಯಾಗಿದ್ದವರು. ಬಾಜ್ವಾ ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ADVERTISEMENT

ಹರಿಯಾಣ ಚುನಾವಣೆಗೆ ಪಕ್ಷವು 89 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಸಿಪಿಎಂಗೆ ಭಿವಾನಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ಮತ್ತು ಅ.8ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.