ADVERTISEMENT

ಪಂಚ ರಾಜ್ಯಗಳ ಚುನಾವಣೆ: ನುಡಿ– ಕಿಡಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 14:27 IST
Last Updated 11 ನವೆಂಬರ್ 2023, 14:27 IST
<div class="paragraphs"><p><strong>ರಾಜನಾಥ್‌ ಸಿಂಗ್‌,</strong></p></div>

ರಾಜನಾಥ್‌ ಸಿಂಗ್‌,

   

ಛತ್ತೀಸಗಢದಲ್ಲಿ ಕಾಂಗ್ರೆಸ್‌ ಸರ್ಕಾರ ಒಂದೂ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಜನರಿಂದ ಈ ಸರ್ಕಾರ ಅಂಕಗಳನ್ನು ಬಯಸಿದರೆ ಅದಕ್ಕೆ ಸಿಗುವುದು ಸೊನ್ನೆಯೇ.

ಹೀಗಿದ್ದೂ ಕಾಂಗ್ರೆಸ್‌ ನಾಯಕರು ತಮ್ಮನ್ನು ಹಿರೋಗಳು ಎಂದುಕೊಳ್ಳುತ್ತಾರೆ. ಅವರು ಹಿರೋಗಳಲ್ಲ, ಜಿರೋಗಳು (ಸೊನ್ನೆ). ಚುನಾವಣೆಯಲ್ಲಿ ಅವರಿಗೆ ಬೀಳ್ಕೊಡುಗೆ ನೀಡುವ ಸಮಯ ಬಂದಿದೆ.

ADVERTISEMENT

ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ 

*****

ರಾಜಸ್ಥಾನವು ಐದು ವರ್ಷಗಳಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ಇದರಿಂದ ಬಿಜೆಪಿ ನಾಯಕರಿಗೆ ಹೆದರಿಕೆಯಾಗಿದೆ. ಹಾಗಾಗೇ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇದು ಆಧಾರರಹಿತ. ಇದು ತಪ್ಪು ಅಷ್ಟೇ ಅಲ್ಲ ಸುಳ್ಳು ಕೂಡ. 

ಟೀಕಿಸಲು ಬಿಜೆಪಿಗೆ ಯಾವ ವಿಷಯಗಳೂ ಇಲ್ಲದ ಕಾರಣ ಇ.ಡಿ ಮತ್ತು ಸಿಬಿಐ ಅಧಿಕಾರಿಗಳನ್ನು ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ಪ್ರಧಾನಿ ಮತ್ತು ಅವರ ಪಕ್ಷದ ನಾಯಕರು ಧ್ರವೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ.

ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

*******

ಒಂದು ಪ್ರದೇಶದ ಮತಬ್ಯಾಂಕನ್ನು ವಶಕ್ಕೆ ಪಡೆಯುವ ಯತ್ನದಲ್ಲಿ ಕಾಂಗ್ರೆಸ್‌ ಇಷ್ಟು ಕೆಳಮಟ್ಟಕ್ಕೆ ಇಳಿಯುವುದೆಂದು ನಾನು ಎಂದಿಗೂ ಊಹಿಸಿರಲಿಲ್ಲ.

ಒಂದು ಧರ್ಮದವರಿಗೆ ನಿರ್ದಿಷ್ಟ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್‌ ತೆಲಂಗಾಣದಲ್ಲಿ, ಮುಸ್ಲಿಂ ಲೀಗ್‌ನ ಮೊಹಮ್ಮದ್‌ ಅಲಿ ಜಿನ್ನಾ ಅವರ ಕನಸನ್ನು ನನಸಾಗಿಸುತ್ತಿದೆ.

ಹಿಮಂತ್‌ ಬಿಸ್ವಾ ಶರ್ಮಾ, ಅಸ್ಸಾ ಮುಖ್ಯಮಂತ್ರಿ

*********

‌ಬಿಜೆಪಿಯೇತರ ರಾಜ್ಯಗಳನ್ನು ರಾಜಭವನದ ಮೂಲಕ ನಿಯಂತ್ರಣದಲ್ಲಿಸಿಕೊಳ್ಳಲು ಬಿಜೆಪಿ ನೇತೃತ್ವದ  ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ರಾಷ್ಟ್ರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಮಾರಕವಾಗಿದೆ.

ರಾಜಭವನವು ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ. ಅದು ಪಂಜಾಬ್‌ ಇರಲಿ, ತಮಿಳುನಾಡು ಇರಲಿ ಅಥವಾ ಛತ್ತೀಸಗಢವೇ ಇರಲಿ, ಡಜನ್‌ಗಟ್ಟಲೆ ಮಸೂದೆಗಳು ರಾಜಭವನದಲ್ಲಿ ಸಿಲುಕಿಕೊಂಡಿವೆ.

ಭೂಪೇಶ್‌ ಬಘೆಲ್‌, ಛತ್ತೀಸಗಢ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.