ನವದೆಹಲಿ: ಬಿಜೆಪಿಯ ಚುನಾವಣಾ ಚಿಹ್ನೆ ಕಮಲವನ್ನು ಜಿ20 ಲಾಂಛನವಾಗಿ ಬಳಕೆ ಮಾಡಿರುವುದನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಕಾಂಗ್ರೆಸ್ ಅಧಿಕಾರದಲ್ಲಿದ್ದು 'ಕೈ' ಲಾಂಛನವನ್ನು ಬಳಕೆ ಮಾಡಿದ್ದಲ್ಲಿ ಸಮರ್ಥನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಮೇಶ್, ಭಾರತದ ಸಾಂಸ್ಕೃತಿಕ ಸಂಕೇತ ಎಂಬ ಕಾರಣಕ್ಕೆ ಬಿಜೆಪಿ ಚುನಾವಣಾ ಚಿಹ್ನೆ ಕಮಲವನ್ನು ಜಿ20 ಲಾಂಛನವಾಗಿ ಬಳಕೆ ಮಾಡಲಾಗಿದೆ ಎಂದು ರಾಜನಾಥ್ ಸಿಂಗ್ ಸಮರ್ಥಿಸಿದ್ದಾರೆ. ಮತ್ತೊಂದೆಡೆ ಕೈ ಲಾಂಛನ ಭಾರತದ ಅತ್ಯಂತ ಪುರಾತನ ವರ್ಣಚಿತ್ರವಾಗಿದೆ ಎಂದು ಹೇಳಿದ್ದಾರೆ.
ಕೈ ಲಾಂಛನ ಭಾರತದ ಗ್ರಾಮೀಣ ಮತ್ತು ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಸಂಕೇತವಾಗಿ ಉಳಿದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಸರ್ಕಾರಿ ಕಾರ್ಯಕ್ರಮಗಳಿಗೆ ಕೈ ಚಿಹ್ನೆ ಬಳಕೆಯನ್ನು ಸಮರ್ಥನೆ ಮಾಡುತ್ತಾರೆಯೇ? ಖಂಡಿತವಾಗಿಯೂ ಇಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.