ADVERTISEMENT

Jharkhand Election: ಜಾರ್ಖಂಡ್‌ನಲ್ಲಿ ‘ಕಳ್ಳರ ಸರ್ಕಾರ’: ಜೆ.ಪಿ. ನಡ್ಡಾ

ಪಿಟಿಐ
Published 12 ನವೆಂಬರ್ 2024, 13:33 IST
Last Updated 12 ನವೆಂಬರ್ 2024, 13:33 IST
<div class="paragraphs"><p>ಜೆ.ಪಿ. ನಡ್ಡಾ</p></div>

ಜೆ.ಪಿ. ನಡ್ಡಾ

   

ಬಾಗೋದರ (ಜಾರ್ಖಂಡ್‌): ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ವಂಶ ರಾಜಕೀಯಕ್ಕೆ ಸಮಾನಾರ್ಥಕವಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಬಾಗೋದರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಸ್ತುತ ಜಾರ್ಖಂಡ್‌ನಲ್ಲಿರುವ ಸರ್ಕಾರವು ‘ಕಳ್ಳರ ಸರ್ಕಾರ’ವಾಗಿದೆ. ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಇನ್ನೂ ಆರೋಪ ಮುಕ್ತವಾಗಿಲ್ಲ, ಜಾಮೀನಿನ ಮೇಲೆ ಹೊರಗಿದ್ದಾರೆ ಅಷ್ಟೇ. ಸೊರೇನ್‌ ಅವರ ಸರ್ಕಾರವು ಹಲವು ಹಗರಣಗಳಿಗೆ ಉತ್ತೇಜನ ನೀಡಿದೆ’ ಎಂದು ನಡ್ಡಾ ಆರೋಪಿಸಿದ್ದಾರೆ.

ADVERTISEMENT

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜನವರಿ 31ರಂದು ಜಾರಿ ನಿರ್ದೇಶನಾಲಯವು ಸೊರೇನ್‌ ಅವರನ್ನು ಬಂಧಿಸಿತ್ತು. ಜೂನ್ 28ರಂದು ಜಾರ್ಖಂಡ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು.

‘ಕಾಂಗ್ರೆಸ್, ಜೆಎಂಎಂ ಮತ್ತು ಆರ್‌ಜೆಡಿ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ವಂಶ ರಾಜಕೀಯಕ್ಕೆ ಸಮಾನಾರ್ಥಕವಾಗಿವೆ. ಇವರು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ಜೆಎಂಎಂ ನೇತೃತ್ವದ ಸರ್ಕಾರವು ಜನರ ಹಕ್ಕುಗಳನ್ನು ಲೂಟಿ ಮಾಡುವ ‘ಕಳ್ಳರ ಸರ್ಕಾರ’ವಾಗಿದೆ. ಈಗ ಈ ಸರ್ಕಾರವನ್ನು ಬೇರುಸಹಿತ ಕಿತ್ತೊಗೆದು, ರಾಜ್ಯದ ಅಭಿವೃದ್ಧಿಗಾಗಿ ಡಬಲ್‌ ಎಂಜಿನ್‌ ಸರ್ಕಾರ ರಚಿಸುವ ಸಮಯ ಬಂದಿದೆ’ ಎಂದು ನಡ್ಡಾ ಹೇಳಿದ್ದಾರೆ.

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್‌ 13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.