ADVERTISEMENT

ನೆಹರೂ ಚಿತ್ರ ಕೈಬಿಟ್ಟ ಐಸಿಎಚ್‌ಆರ್‌: ಕಾಂಗ್ರೆಸ್‌ ಮುಖಂಡರ ತರಾಟೆ

ಪಿಟಿಐ
Published 28 ಆಗಸ್ಟ್ 2021, 13:01 IST
Last Updated 28 ಆಗಸ್ಟ್ 2021, 13:01 IST
ಜವಹರಲಾಲ್ ನೆಹರೂ
ಜವಹರಲಾಲ್ ನೆಹರೂ   

ನವದೆಹಲಿ (ಪಿಟಿಐ): ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಗಳಿಂದ ಜವಾಹರ್‌ಲಾಲ್‌ ನೆಹರೂ ಭಾವಚಿತ್ರವನ್ನು ಕೈಬಿಡುವ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್ಆರ್‌) ಕ್ರಮಕ್ಕೆ ಕಾಂಗ್ರೆಸ್‌ ಮುಖಂಡರು ಕಿಡಿಕಾರಿದ್ದಾರೆ.

ನೆಹರೂ ಭಾವಚಿತ್ರ ಹೊರತುಪಡಿಸಿ ಮಹಾತ್ಮಗಾಂಧಿ, ಭಗತ್‌ ಸಿಂಗ್, ಸುಭಾಷ್‌ ಚಂದ್ರ ಬೋಸ್, ವೀರ ಸಾವರ್ಕರ್ ಸೇರಿದಂತೆ ಹಲವರ ಭಾವಚಿತ್ರಗಳಿರುವ ಐಸಿಎಚ್‌ಆರ್‌ ಚಿತ್ರವನ್ನು ಮುಖಂಡರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಐಸಿಎಚ್‌ಆರ್ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌, ಭಾವಚಿತ್ರ ಕೈಬಿಟ್ಟಿದ್ದನ್ನು ‘ದುಷ್ಟತನದ ಕ್ರಮ‘ ಎಂದು ಬಣ್ಣಿಸಿದ್ದರೆ, ಪಕ್ಷದ ವಕ್ತಾರ ಗೌರವ್ ಗೊಗೊಯ್, ‘ಯಾವುದೇ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ತನ್ನ ಪ್ರಥಮ ಪ್ರಧಾನಿಯ ಚಿತ್ರ ಕೈಬಿಡುವುದಿಲ್ಲ’ ಎಂದಿದ್ದಾರೆ. ‘ಇದು ಸಣ್ಣತನ ಮತ್ತು ಅನ್ಯಾಯ’ ಎಂದು ಹೇಳಿದ್ದಾರೆ.

ADVERTISEMENT

ಮತ್ತೊಬ್ಬ ಮುಖಂಡ ಶಶಿತರೂರ್‌ ಅವರು, ಭಾವಚಿತ್ರ ತೆಗೆಯುವ ಮೂಲಕ ಐಸಿಎಚ್‌ಆರ್ ತನ್ನನ್ನು ತಾನು ಅಪಮಾನಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.