ADVERTISEMENT

ನೆಹರೂ ಹೆಸರು ಉಲ್ಲೇಖವಿಲ್ಲ; ಇತಿಹಾಸದಿಂದ ಅಳಿಸಲು ಯತ್ನ: ಕಾಂಗ್ರೆಸ್

ಪಿಟಿಐ
Published 15 ಆಗಸ್ಟ್ 2024, 5:09 IST
Last Updated 15 ಆಗಸ್ಟ್ 2024, 5:09 IST
<div class="paragraphs"><p>ಜೈರಾಮ್ ರಮೇಶ್ </p></div>

ಜೈರಾಮ್ ರಮೇಶ್

   

–ಪಿಟಿಐ ಚಿತ್ರ

ನವದೆಹಲಿ: 78ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದಲ್ಲಿ ಮಹಾನ್ ವ್ಯಕ್ತಿಗಳ ಪೈಕಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಉಲ್ಲೇಖಿಸದೇ ಇರುವುದಕ್ಕೆ ಕಾಂಗ್ರೆಸ್ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ADVERTISEMENT

ಇದು ಇತಿಹಾಸದಿಂದ ದೇಶದ ಮೊದಲ ಪ್ರಧಾನಿಯನ್ನು ಅಳಿಸಿ ಹಾಕುವ ನಿರಂತರ ಅಭಿಯಾನದ ಭಾಗವಾಗಿದೆ ಎಂದು ದೂರಿದೆ.

'1947ರ ಆಗಸ್ಟ್ 14ರ ಮಧ್ಯರಾತ್ರಿ ಜವಾಹರಲಾಲ್ ನೆಹರೂ ಸೆಂಟ್ರಲ್ ಹಾಲ್‌ನಲ್ಲಿ ಮಹತ್ವದ ಭಾಷಣ ಮಾಡಿದ್ದರು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

'ಅಂದು ರಾಷ್ಟ್ರವನ್ನು ಉದ್ದೇಶಿಸಿ ಆಲ್ ಇಂಡಿಯಾ ರೇಡಿಯೊದಲ್ಲಿ ಮಾಡಿದ ಮೊದಲ ಭಾಷಣದಲ್ಲಿ 'ಭಾರತೀಯರ ಮೊದಲ ಸೇವಕ' ಎಂದು ನೆಹರೂ ಹೇಳಿದ್ದರು. 1947ರ ಆಗಸ್ಟ್ 15ರ ಪತ್ರಿಕೆಗಳಲ್ಲೂ ರಾಷ್ಟ್ರಕ್ಕೆ ಅವರು ನೀಡಿದ ಸಂದೇಶ ಮುದ್ರಣಗೊಂಡಿತ್ತು. ಅಂದು 14 ಸಚಿವರೂ ಪ್ರಮಾಣವಚಣ ಸ್ವೀಕರಿಸಿದ್ದರು' ಎಂದು ಅವರು ಉಲ್ಲೇಖಿಸಿದ್ದಾರೆ.

'ಕಳೆದ ರಾತ್ರಿ ರಾಷ್ಟ್ರಪತಿ ದೇಶವನ್ನು ಉದ್ದೇಶಿಸಿದ ಭಾಷಣದಲ್ಲಿ ಸ್ವಾತಂತ್ರ್ಯ ಚಳವಳಿಯ ಹಲವಾರು ಅಪ್ರತಿಮ ವ್ಯಕ್ತಿಗಳನ್ನು ಪ್ರಸ್ತಾಪಿಸಿದ್ದರು. ಆದರೆ ಬ್ರಿಟಿಷರ ಜೈಲಿನಲ್ಲಿ 10 ವರ್ಷ ಕಳೆದ ಭಾರತದ ಮೊದಲ ಪ್ರಧಾನಿಯ ಹೆಸರನ್ನು ಉಲ್ಲೇಖ ಮಾಡದಿರುವುದು ನಿಜಕ್ಕೂ ದುರದೃಷ್ಟಕರ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.