ಕೊಚ್ಚಿ: ಪಕ್ಷದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳೆಲ್ಲರೂ ‘ಒಟ್ಟು ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುವಂತಿರಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಹೇಳಿದ್ದಾರೆ.
‘ಅಧ್ಯಕ್ಷ ಹುದ್ದೆ ಎಂಬುದು ಪದವಿಯಲ್ಲ, ಆದರೆ ನಂಬಿಕೆಯ ವ್ಯವಸ್ಥೆ. ಇದು ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ’ ಎಂದು ರಾಹುಲ್ ಹೇಳಿದರು.
‘ಈ ದೇಶದ ಸಾಂಸ್ಥಿಕ ವ್ಯವಸ್ಥೆಯನ್ನು ಆಕ್ರಮಣ ಮಾಡಿಕೊಂಡಿರುವ ವ್ಯವಸ್ಥೆ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಅವರ ಬಳಿ ಅಪಾರ ಹಣವಿದೆ. ಜನರನ್ನು ಖರೀದಿಸಲು ಶಕ್ತವಾಗಿದ್ದಾರೆ. ಜನರ ಮೇಲೆ ಅವರು ಒತ್ತಡ ಹೇರುತ್ತಾರೆ. ಬೆದರಿಕೆಯೊಡ್ಡುತ್ತಾರೆ. ಗೋವಾದಲ್ಲಿ ನಡೆದಿರುವುದೇ ಅದೇ’ ಎಂದು ಅವರು ಪರೋಕ್ಷವಾಗಿ ಬಿಜೆಪಿಯ ವಿರುದ್ಧ ಕಿಡಿ ಕಾರಿದರು.
ಜನರು ಒಂದಾಗಬೇಕು ಎಂಬುದನ್ನು ಸಾರುವ ಉದ್ದೇಶವನ್ನು ಭಾರತ ಜೋಡೊ ಯಾತ್ರೆ ಹೊಂದಿದೆ ಎಂದು ರಾಹುಲ್ ಹೇಳಿದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.