ADVERTISEMENT

Rajasthan Elections: ಮನೆಯೊಡತಿಗೆ ವಾರ್ಷಿಕ ₹10,000ದ ಭರವಸೆ ನೀಡಿದ ಕಾಂಗ್ರೆಸ್

ಪಿಟಿಐ
Published 25 ಅಕ್ಟೋಬರ್ 2023, 19:45 IST
Last Updated 25 ಅಕ್ಟೋಬರ್ 2023, 19:45 IST
<div class="paragraphs"><p>ರಾಜಸ್ಥಾನದ ಜುಂಜುನು ಜಿಲ್ಲೆಯ ಅರ್ಡಾವತಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದರು. ಸಚಿನ್ ಪೈಲಟ್‌, ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಸುಖ್‌ಜಿಂದರ್‌ ಸಿಂಗ್‌ ಇದ್ದಾರೆ </p></div>

ರಾಜಸ್ಥಾನದ ಜುಂಜುನು ಜಿಲ್ಲೆಯ ಅರ್ಡಾವತಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದರು. ಸಚಿನ್ ಪೈಲಟ್‌, ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಸುಖ್‌ಜಿಂದರ್‌ ಸಿಂಗ್‌ ಇದ್ದಾರೆ

   

ಪಿಟಿಐ ಚಿತ್ರ

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ಮನೆ ಯಜಮಾನಿಗೆ  ₹ 10,000 ವಾರ್ಷಿಕ ಗೌರವಧನ ನೀಡುವುದಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆಶ್ವಾಸನೆ ನೀಡಿದರು. ಇದೇ ವೇಳೆ ಬಿಜೆಪಿ ಘೋಷಿಸಿರುವ ಕಲ್ಯಾಣ ಕಾರ್ಯಕ್ರಮಗಳು ಟೊಳ್ಳು, ಅವು ಕಾರ್ಯಗತವಾಗುವಂಥವಲ್ಲ ಎಂದು ಇಲ್ಲಿ  ಟೀಕಿಸಿದರು.

ADVERTISEMENT

ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು, ಎರಡು ಗ್ಯಾರಂಟಿಗಳನ್ನು ಪ್ರಕಟಿಸಿದರು. ಕಾಂಗ್ರೆಸ್‌ ಮರು ಆಯ್ಕೆಯಾದರೆ 1.05 ಕೋಟಿ ಜನರಿಗೆ  ₹ 500 ದರದಲ್ಲಿ ಅಡುಗೆ ಅನಿಲ ಸಿಲಿಂಡರ್‌  ಮತ್ತು ಮನೆ ಯಜಮಾನಿಗೆ ₹ 10,000 ವಾರ್ಷಿಕ ಗೌರವಧನ ನೀಡುವುದಾಗಿ ಪ್ರಕಟಿಸಿದರು.

ಜುಂಜುನು ಜಿಲ್ಲೆಯ ಅರ್ಡಾವತಾ ಗ್ರಾಮದಲ್ಲಿ ರ್‍ಯಾಲಿ ನಡೆಯಿತು. ರಾಜ್ಯದಲ್ಲಿ ವಾರದೊಳಗೆ ಪ್ರಿಯಾಂಕಾ ಅವರು ಭಾಗವಹಿಸುತ್ತಿರುವ ಎರಡನೇ ರ್‍ಯಾಲಿ ಇದಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಗಿದೆ. ಆದರೆ ಇದು ಜಾರಿಗೊಳ್ಳಲು 10 ವರ್ಷಗಳು ಬೇಕಿದೆ. ಪೂರ್ವ ರಾಜಸ್ಥಾನ ಕಾಲುವೆ ಯೋಜನೆ (ಇಆರ್‌ಸಿಪಿ) ಪ್ರಕಟಿಸಿ 10 ವರ್ಷಗಳು ಕಳೆದೇ ಹೋಗಿದ್ದರೂ ಕಾರ್ಯಗತವಾಗಿಲ್ಲ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರದ ಯೋಜನೆಗಳು ಟೊಳ್ಳಾಗಿವೆ. ಆದರೆ ಕಾಂಗ್ರೆಸ್‌ ಸರ್ಕಾರದ ಯೋಜನೆಗಳು ಅನುಷ್ಠಾನಕ್ಕೆ ಬರುವಂಥದ್ದು. ಚುನಾವಣೆ ವೇಳೆ ಧರ್ಮ ಮತ್ತು ಜಾತಿ ಬಗ್ಗೆ ಮಾತನಾಡಿದರೆ ಬಿಜೆಪಿ ಜಯಗಳಿಸುತ್ತದೆ ಎಂದು ಆ ಪಕ್ಷ ತಿಳಿದಿದೆ. ಕೇಂದ್ರ ಸರ್ಕಾರ ಜನರನ್ನು ನಿಗ್ರಹಿಸಲು ಯತ್ನಿಸುತ್ತಿದೆ. ಅಧಿಕಾರದಲ್ಲಿ ಇರಲು ಮಾತ್ರ ಅದು ಬಯಸುತ್ತಿದೆ’ ಎಂದು ಟೀಕಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆಯ್ದ ಕೆಲವು ಉದ್ದಿಮೆದಾರರಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸರ್ಕಾರ ಸಾರ್ವಜನಿಕರ ದೂರು–ದುಮ್ಮಾನಗಳನ್ನು ಆಲಿಸುವುದಿಲ್ಲ ಎಂದು ಅವರ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.