ADVERTISEMENT

‘ದೇಶಕ್ಕಾಗಿ ದೇಣಿಗೆ ನೀಡಿ’: 48 ಗಂಟೆಗಳಲ್ಲಿ ₹2.81 ಕೋಟಿ ಸಂಗ್ರಹ

ಪಿಟಿಐ
Published 20 ಡಿಸೆಂಬರ್ 2023, 16:25 IST
Last Updated 20 ಡಿಸೆಂಬರ್ 2023, 16:25 IST
   

ನವದೆಹಲಿ: ಕಾಂಗ್ರೆಸ್‌ನ ‘ದೇಶಕ್ಕಾಗಿ ದೇಣಿಗೆ ನೀಡಿ’ (ಡೊನೇಟ್‌ ಫಾರ್‌ ದೇಶ್) ಅಭಿಯಾನದಲ್ಲಿ 48 ಗಂಟೆಗಳಲ್ಲಿ ₹2.81 ಕೋಟಿ ಸಂಗ್ರಹವಾಗಿದೆ.

1.13 ಲಕ್ಷ ಮಂದಿ ದೇಣಿಗೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಬುಧವಾರ ತಿಳಿಸಿವೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಚೆಗೆ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಶೇ 80ರಷ್ಟು ದೇಣಿಗೆ ಯುಪಿಐ ವಹಿವಾಟು ಮೂಲಕ ಲಭಿಸಿದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.