ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆ ಬಿಡುಗಡೆ ಮಾಡಿದೆ.
250 ಯೂನಿಟ್‌ವರೆಗೆ ಉಚಿತ ವಿದ್ಯುತ್, ಜಾತಿ ಆಧಾರಿತ ಸಮೀಕ್ಷೆ ಮತ್ತು ವರ್ಷದಲ್ಲಿ ಸರ್ಕಾರದ ಎಲ್ಲ ಖಾಲಿ ಹುದ್ದೆಗಳ ಭರ್ತಿ ಮಾಡುವ ಭರವಸೆಯನ್ನು ನೀಡಿದೆ.
1932ರ ಖಾತೆ ಆಧಾರಿತ ಕಾಯಂ ವಿಳಾಸ ನೀತಿ ಮತ್ತು ಆದಿವಾಸಿಗಳ ಸರ್ನಾ ಧಾರ್ಮಿಕ ಸಂಹಿತೆಯ ಅನುಷ್ಠಾನ ಸೇರಿದಂತೆ ಏಳು ಭರವಸೆಗಳ ಮೇಲೆ ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಬಂಧು ಟಿರ್ಕೆ ಅವರು ಬಿಡುಗಡೆ ಮಾಡಿದ ಪ್ರಣಾಳಿಕೆ ಕೇಂದ್ರೀಕರಿಸಿದೆ.
43 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುವುದಕ್ಕೂ ಒಂದು ದಿನ ಮೊದಲು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಈಗ ಇರುವ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಯೋಜನೆಯನ್ನು 250 ಯೂನಿಟ್‌ಗೆ ವಿಸ್ತರಣೆ, ಖಾಲಿ ಇರುವ ಸರ್ಕಾರದ ಎಲ್ಲ ಹುದ್ದೆಗಳನ್ನು ವರ್ಷದೊಳಗೆ ತುಂಬುವ ಭರವಸೆ ನೀಡಿದ್ದೇವೆ ಎಂದು ಟಿರ್ಕಿ ಹೇಳಿದ್ದಾರೆ.
ಜಾರ್ಖಂಡ್‌ನ ಬುಡಕಟ್ಟು ಜನರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಮಿತಿಯು, ಪ್ರತಿ ಜಿಲ್ಲೆಯಲ್ಲೂ ಜನರ ಜೊತೆ ಸಂವಾದ ನಡೆಸಿದೆ. ನಮ್ಮ ಪ್ರಣಾಳಿಕೆ ಸಾಮಾನ್ಯ ಜನರ ಪರವಾಗುರುವುದನ್ನು ಖಚಿತಪಡಿಸಿಕೊಳ್ಳಲು ಬೇಕಾದ ಎಲ್ಲ ಪ್ರಯತ್ನ ಮಾಡಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.