ADVERTISEMENT

ಹೋಮಿಯೊಪಥಿ ಮಂಡಳಿ ರಚನೆ ವಿಳಂಬ: ಕಾಂಗ್ರೆಸ್ ತರಾಟೆ

ಪಿಟಿಐ
Published 18 ಸೆಪ್ಟೆಂಬರ್ 2020, 11:13 IST
Last Updated 18 ಸೆಪ್ಟೆಂಬರ್ 2020, 11:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹೋಮಿಯೊಪಥಿ ಕೇಂದ್ರೀಯ ಮಂಡಳಿ ರಚಿಸುವಲ್ಲಿ ಕೇಂದ್ರ ಸರ್ಕಾರ ತೀರಾ ವಿಳಂಬ ಮಾಡುತ್ತಿದೆ. ಇದು, ಆರ್‌ಬಿಐ ಮತ್ತು ಯುಜಿಸಿ ವಿಷಯದಲ್ಲಿ ಮಾಡಿದಂತೆ ಮಂಡಳಿಯ ಸ್ವಾಯತ್ತೆಯನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ ಎಂದುಕಾಂಗ್ರೆಸ್ ಪಕ್ಷ ಟೀಕಿಸಿದೆ.

ಕೇಂದ್ರ ಹೋಮಿಯೊಪಥಿ ಮಂಡಳಿ ರಚನೆಗೆ ಅವಧಿಯನ್ನು ವರ್ಷ ವಿಸ್ತರಿಸಲು ಅವಕಾಶ ಕೋರುವ ‘ಹೋಮಿಯೊಪಥಿ ಕೇಂದ್ರೀಯ ಮಂಡಳಿ (ತಿದ್ದುಪಡಿ) ಕಾಯ್ದೆ 2020’ ಮಸೂದೆಯನ್ನು ಶುಕ್ರವಾರ ಮಂಡಿಸಲಾಯಿತು.

ರಾಜ್ಯಸಭೆಯಲ್ಲಿ ಚರ್ಚೆ ಆರಂಭಿಸಿದಕಾಂಗ್ರೆಸ್‌ ನಾಯಕ ರಿಪುನ್ ಬೊರಾ, ‘ಮಂಡಳಿ ರಚಿಸಲು ಮೂರು ವರ್ಷ ವಿಳಂಬವೇಕೆ? ಈಗ ಮಂಡಳಿ ಆಯುಷ್ ಇಲಾಖೆಸುಪರ್ದಿಯಲ್ಲಿದೆ. ಈ ಮೂಲಕ ಅದರ ಸ್ವಾಯತ್ತೆಯನ್ನು ಕಸಿದುಕೊಳ್ಳಲಾಗಿದೆ’ ಎಂದು ಅರೋಪಿಸಿದರು.

ADVERTISEMENT

ಕೇಂದ್ರ ಸರ್ಕಾರ 2018ರಲ್ಲಿ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ನಿರ್ದೇಕರ ಮಂಡಳಿಯನ್ನು ರಚಿಸಿತ್ತು. ಹೋಮಿಯೊಪಥಿ ಕಾಲೇಜುಗಳ ಸ್ಥಾಪನೆಗೆ ಮಂಡಳಿ ಲಂಚ ಪಡೆಯುತ್ತಿದೆ ಎಂಬ ಆರೋಪಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.