ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆ್ಯಂಟನಿ ಅವರ ಮಗ ಅನಿಲ್ .ಕೆ. ಆ್ಯಂಟನಿ ಅವರು ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ವಿ. ಮುರಳಿಧರನ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಅನಿಲ್, ಕಾಂಗ್ರೆಸ್ ಪಕ್ಷವು ದೇಶಕ್ಕಾಗಿ ಕೆಲಸ ಮಾಡುವುದನ್ನು ಬಿಟ್ಟು ಒಂದು ಕುಟುಂಬಕ್ಕೋಸ್ಕರ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ಕುರಿತಂತೆ ಪಕ್ಷದ ನಿಲುವನ್ನು ಖಂಡಿಸಿ ಅವರು, ಕಾಂಗ್ರೆಸ್ ತೊರೆದಿದ್ದರು.
‘ಅನಿಲ್ ಆ್ಯಂಟನಿ ಅವರನ್ನು ಸ್ವಾಗತಿಸಿದ ಗೋಯಲ್, ಅನಿಲ್ ಅತ್ಯಂತ ತಳಮಟ್ಟದ ರಾಜಕೀಯ ಕಾರ್ಯಕರ್ತ. ದೇಶದ ಜನರ ಒಳಿತಿನ ಬಗ್ಗೆ ಬಿಜೆಪಿಗೆ ಇರುವ ಕಾಳಜಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಮೋದಿ ಅವರ ದೃಷ್ಟಿಕೋನದ ಬಗ್ಗೆ ಅವರಿಗೆ ಅರಿವಾಗಿದೆ’ಎಂದು ಹೇಳಿದ್ದಾರೆ.
‘ಇದು ವ್ಯಕ್ತಿತ್ವದ ವಿಚಾರ ಅಲ್ಲ. ಇದು ವಿಚಾರ ಭೇದಗಳು ಮತ್ತು ಅಭಿಪ್ರಾಯಗಳ ವಿಷಯವಾಗಿದೆ. ನಾನು ಸೂಕ್ತವಾದ ನಿರ್ಧಾರ ಕೈಗೊಂಡಿರುವುದಾಗಿ ಬಲವಾಗಿ ನಂಬುತ್ತೇನೆ. ನಮ್ಮ ತಂದೆ ಬಗೆಗಿನ ಗೌರವ ಇದ್ದೇ ಇರುತ್ತದೆ’ ಎಂದು ಅನಿಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.