ADVERTISEMENT

ಸಿಪಿಎಂನಿಂದ ಮತದಾರರಿಗೆ ಕಿರುಕುಳ: ಕೆ.ಸಿ. ವೇಣುಗೋಪಾಲ್‌

ಪಿಟಿಐ
Published 27 ಏಪ್ರಿಲ್ 2024, 16:26 IST
Last Updated 27 ಏಪ್ರಿಲ್ 2024, 16:26 IST
ಕೆ.ಸಿ. ವೇಣುಗೋಪಾಲ್‌
ಕೆ.ಸಿ. ವೇಣುಗೋಪಾಲ್‌   

ತಿರುವನಂತಪುರ: ಕೇರಳದಲ್ಲಿ ಮತದಾರರಿಗೆ ಕಿರುಕುಳ ನೀಡುವ ಮೂಲಕ ಆಡಳಿತಾರೂಢ ಸಿಪಿಎಂ, ಚುನಾವಣಾ ಪಕ್ರಿಯೆಯನ್ನೇ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಶನಿವಾರ ಆರೋಪಿಸಿದರು

ಮತದಾನದ ಶೇಕಡಾವಾರು ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಅವರು ಹೇಳಿದರು.

ದೇಶದಾದ್ಯಂತ 88 ಲೋಕಸಭಾ ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನದಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಿರುವ ವಿಶ್ವಾಸವಿದೆ ಎಂದು ತಿಳಿಸಿದರು.

ADVERTISEMENT

ಜನರು ಬಿಜೆಪಿಯ ಪರವಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಂಬಿಸಿದ್ದರು. ಅದು ಎರಡನೇ ಹಂತದ ಮತದಾನದ ನಂತರ ಇಲ್ಲವಾಗಿದೆ ಎಂದರು.

ಕೇರಳದ ಎಲ್ಲಾ 20 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸಾವಿರಾರು ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಚುನಾವಣಾ ಅಧಿಕಾರಿಗಳು ಕೈಬಿಟ್ಟಿದ್ದರು ಎಂದು ಅವರು ಆರೋಪಿಸಿದರು. 

ಕೇರಳದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.