ನವದೆಹಲಿ: ಭಾರತೀಯ ಯುವ ಕಾಂಗ್ರೆಸ್‌ನ(ಐವೈಸಿ) ನೂತನ ಅಧ್ಯಕ್ಷರಾಗಿ ಉದಯ್ ಭಾನು ಛಿಬ್ ಅವರನ್ನು ಭಾನುವಾರ ನೇಮಿಸಲಾಗಿದೆ.
ಇದಕ್ಕೂ ಮೊದಲು ಛಿಬ್ ಅವರು ಐವೈಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜಮ್ಮುವಿನ ಪಲೌರಾದವರಾದ ಅವರು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು.
ಕಳೆದ ಐದು ವರ್ಷ ಶ್ರೀನಿವಾಸ್ ಬಿ.ವಿ. ಅವರು ಐವೈಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವವು ಐವೈಸಿಗೆ ಫಲಪ್ರದಾಯಕವಾಗಿತ್ತು. ಸಂಘಟನೆಗೆ ಅವರು ನೀಡಿದ ಕೊಡುಗೆಗಳನ್ನು ಕಾಂಗ್ರೆಸ್ ಶ್ಲಾಘಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.