ADVERTISEMENT

ಫೆಬ್ರುವರಿ 2ರಂದು ಜಾರ್ಖಂಡ್ ಪ್ರವೇಶಿಸಲಿರುವ ಭಾರತ ಜೋಡೊ ನ್ಯಾಯ ಯಾತ್ರೆ

ಪಿಟಿಐ
Published 27 ಜನವರಿ 2024, 7:35 IST
Last Updated 27 ಜನವರಿ 2024, 7:35 IST
<div class="paragraphs"><p>ಪ್ರಾತಿನಿಧಿಕ&nbsp;ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಂಚಿ: ಕಾಂಗ್ರೆಸ್‌ನ 'ಭಾರತ ಜೋಡೊ ನ್ಯಾಯ ಯಾತ್ರೆ ಫೆಬ್ರುವರಿ 2ರಂದು ಜಾರ್ಖಂಡ್‌ಗೆ ಪ್ರವೇಶಿಸಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ತಿಳಿಸಿದ್ದಾರೆ.

ಯಾತ್ರೆಯು ಎರಡು ಹಂತಗಳಲ್ಲಿ ನಡೆಯಲಿದ್ದು, 8 ದಿನಗಳ ಕಾಲ 13 ಜಿಲ್ಲೆಗಳಲ್ಲಿ 804 ಕಿ.ಮೀ ಕ್ರಮಿಸಲಿದೆ. ಪಾಕುರ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಠಾಕೂರ್ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ಜಾರ್ಖಂಡ್‌ನಲ್ಲಿ ಯಾತ್ರೆಯ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಫೆಬ್ರುವರಿ 2ರಂದು ಪಾಕುರ್ ಜಿಲ್ಲೆಯಿಂದ ರಾಜ್ಯವನ್ನು ಪ್ರವೇಶಿಸಲಿದೆ. ಪಕ್ಷದ ಸಭೆ ಮತ್ತು ರ್‍ಯಾಲಿ ನಡೆಯುವ ಸ್ಥಳಗಳನ್ನು ಒಳಗೊಂಡಿರುವ ಮಾರ್ಗ ಸೂಚಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಿದ್ಧತೆಗಳ ಪರಿಶೀಲನೆಗಾಗಿ ಠಾಕೂರ್ ಮತ್ತು ಇತರ ಹಿರಿಯ ರಾಜ್ಯ ಕಾಂಗ್ರೆಸ್ ನಾಯಕರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಾವು ಈಗಾಗಲೇ ರಾಮಗಢ, ದಿಯೋಘರ್, ದುಮ್ಕಾ ಮತ್ತು ಪಾಕುರ್‌ಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದೇವೆ ಎಂದು ಠಾಕೂರ್ ಹೇಳಿದ್ದಾರೆ.

ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ 'ಭಾರತ ಜೋಡೊ ನ್ಯಾಯ ಯಾತ್ರೆ ' 67 ದಿನಗಳಲ್ಲಿ 6,713 ಕಿ.ಮೀ ಕ್ರಮಿಸಲಿದೆ. 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಸಾಗಿ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.