ನವದೆಹಲಿ:ಎಎಪಿ ಪಕ್ಷದ ಮಾಜಿ ಶಾಸಕಿ ಮತ್ತುಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಾಂಬ ಅವರುತಮ್ಮ ಬಗ್ಗೆ ಮಾತನಾಡಿದ ಎಎಪಿ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದ ಘಟನೆ ಶನಿವಾರ ನಡೆದಿದೆ.
ಚಾಂದಿನಿ ಚೌಕ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಲಾಂಬ ಇಲ್ಲಿನ ಮಂಜು ಕಾ–ತಿಲ್ಲಾ ಬಳಿಯ ಟಾಗೋರ್ ಗಾರ್ಡನ್ ಮತಗಟ್ಟೆ ಸಂಖ್ಯೆ 161ರಲ್ಲಿ ಮತಚಲಾಯಿಸಿದರು. ಈ ವೇಳೆ ತಮ್ಮ ಮಗನ ಬಗ್ಗೆ ಮಾತನಾಡಿದ ವ್ಯಕ್ತಿಗೆ ಹೊಡೆಯಲು ಲಾಂಬ ಮುಂದಾಗಿದ್ದಾರೆ. ಅಷ್ಟರಲ್ಲಿಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಬಳಿಕ ಆ ವ್ಯಕ್ತಿಯ ವಿರುದ್ಧ ಕೂಗಾಡಿಕಣ್ಣೀರು ಹಾಕಿದ ಅವರು, ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಲಾಂಬಕಳೆದ ಬಾರಿಯೂ ಚಾಂದಿನಿ ಚೌಕ್‌ನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರಿಗೆಎಎಪಿಯಪ್ರಹ್ಲಾದ್ ಸಿಂಗ್ ಸಾಹ್ನಿ ಮತ್ತು ಬಿಜೆಪಿಯ ಸುಮಬನ್ ಗುಪ್ತಾ ಎದುರಾಳಿಯಾಗಿದ್ದಾರೆ.
ಇದನ್ನೂ ಓದಿ:ಎಎಪಿಗೆ ಗುಡ್ ಬೈ ಹೇಳಿದ ದೆಹಲಿ ಶಾಸಕಿ ಅಲ್ಕಾ ಲಾಂಬ
ಇಂದು ಸಂಜೆ 6 ಗಂಟೆ ವರೆಗೆ ಮತದಾನ ಮುಂದುವರಿಯಲಿದ್ದು, ಫಲಿತಾಂಶ ಇದೇ ತಿಂಗಳ 11 ರಂದು ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.