ADVERTISEMENT

ದಲಿತರು, ಆದಿವಾಸಿಗಳ ಮೇಲೆ ಹೆಚ್ಚುತ್ತಿರುವ ಅಪರಾಧ: BJP ವಿರುದ್ಧ ಖರ್ಗೆ ವಾಗ್ದಾಳಿ

ಪಿಟಿಐ
Published 8 ಡಿಸೆಂಬರ್ 2023, 7:57 IST
Last Updated 8 ಡಿಸೆಂಬರ್ 2023, 7:57 IST
ಮಲ್ಲಿಕಾರ್ಜುನ ಖರ್ಗೆ 
ಮಲ್ಲಿಕಾರ್ಜುನ ಖರ್ಗೆ    

ನವದಹೆಲಿ: ದೇಶದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಹೆಚ್ಚುತ್ತಿರುವ ಅಪರಾಧಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಸಮಾಜವನ್ನು ವಿಭಜಿಸುವ ಬಿಜೆಪಿಯ ಅಜೆಂಡಾದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್‌ಸಿಆರ್‌ಬಿ) ಬಿಡುಗಡೆಗೊಳಿಸಿರುವ ಇತ್ತೀಚಿನ ವರದಿಯು ಕೇವಲ ಅಂಕಿಅಂಶಗಳಲ್ಲ, ಇದು ಎಸ್‌ಸಿ – ಎಸ್‌ಟಿ ಸಮುದಾಯದ ಜೀವನವನ್ನು ಅಸುರಕ್ಷಿತವಾಗಿಸುವ ಬಿಜೆಪಿಯ ದಾಖಲೆಯಾಗಿದೆ’ ಎಂದು ಹೇಳಿದ್ದಾರೆ.

ಅನ್ಯಾಯ ಮತ್ತು ದೌರ್ಜನ್ಯದ ಮೂಲಕ ಸಮಾಜವನ್ನು ಒಡೆಯುವುದು ಬಿಜೆಪಿಯ ಷಡ್ಯಂತ್ರದ ಭಾಗವಾಗಿದೆ. ದಲಿತರು ಮತ್ತು ಆದಿವಾಸಿಗಳ ಮೇಲಿನ ನಿರಂತರ ದಬ್ಬಾಳಿಕೆಯು ಬಿಜೆಪಿ– ಆರ್‌ಎಸ್‌ಎಸ್‌ನ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ. 2013 ರಿಂದ ದಲಿತರ ಮೇಲಿನ ಅಪರಾಧಗಳಲ್ಲಿ ಶೇಕಡ 46.11 ಮತ್ತು ಆದಿವಾಸಿಗಳ ವಿರುದ್ಧ ಅಪರಾಧಗಳಲ್ಲಿ ಶೇಕಡ 48.15 ರಷ್ಟು ಹೆಚ್ಚಳವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.