ADVERTISEMENT

ಪುಲ್ವಾಮಾ ದಾಳಿಯ ಬಗ್ಗೆ ಶ್ವೇತಪತ್ರ ಹೊರಡಿಸಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

ಪಿಟಿಐ
Published 19 ಏಪ್ರಿಲ್ 2023, 2:38 IST
Last Updated 19 ಏಪ್ರಿಲ್ 2023, 2:38 IST
   

ನವದೆಹಲಿ: ಪುಲ್ವಾಮಾ ದಾಳಿಗೆ ಸಂಬಂಧಿಸಿ ಯಾವೆಲ್ಲಾ ‘ಗುಪ್ತಚರ ವೈಫಲ್ಯಗಳು’ ನಡೆದಿವೆ ಹಾಗೂ ಯಾಕಾಗಿ ಸೈನಿಕರಿಗೆ ಹೆಲಿಕಾಪ್ಟರ್‌ ನೀಡಲು ನಿರಾಕರಿಸಲಾಯಿತು ಎಂಬ ಪ್ರಶ್ನೆಗಳಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್‌ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ದಾಳಿಯ ಸಂಬಂಧ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ನೀಡುವ ಹೇಳಿಕೆಗೆ ಕೇಂದ್ರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮಲಿಕ್‌ ಅವರ ವಿಶ್ವಾಸಾರ್ಯತೆಯ ಕುರಿತು ಬಿಜೆಪಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಜೊತೆಗೆ, ಮಲಿಕ್‌ ಅವರ ಹಳೆಯ ಹಲವು ಹೇಳಿಕೆಗಳನ್ನೂ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದೆ.

ದಾಳಿ ಹೇಗೆ ನಡೆಯಿತು. ಯಾವೆಲ್ಲಾ ಗುಪ್ತಚರ ವೈಫಲ್ಯಗಳು ನಡೆದಿವೆ. ಯಾಕಾಗಿ ಸೈನಿಕರಿಗೆ ಹೆಲಿಕಾಪ್ಟರ್‌ಗಳನ್ನು ನಿರಾಕರಿಸಲಾಯಿತು. ಭದ್ರತೆ ಒದಗಿಸುವಲ್ಲಿ ಯಾವೆಲ್ಲಾ ತಪ್ಪುಗಳು ನಡೆದಿವೆ. ಈ ಎಲ್ಲದರಲ್ಲೂ ಸಿಆರ್‌ಪಿಎಫ್‌, ಕೇಂದ್ರ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಪ್ರಧಾನಿ ಮೋದಿ ಅವರ ಪಾತ್ರ ಏನಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಿ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.