ADVERTISEMENT

ಕೋವಿಡ್ ಪ್ರಕರಣಗಳ ಏರಿಕೆ ನಡುವೆ ಕುಂಭಮೇಳ: ಕೇಂದ್ರದ ವಿರುದ್ಧ ಸಿಂಗ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 9:21 IST
Last Updated 16 ಮಾರ್ಚ್ 2021, 9:21 IST
ದಿಗ್ವಿಜಯ್‌ ಸಿಂಗ್‌
ದಿಗ್ವಿಜಯ್‌ ಸಿಂಗ್‌    

ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಆದಾಗ್ಯೂಕೇಂದ್ರ ಸರ್ಕಾರವು ಉತ್ತರಾಖಂಡದಲ್ಲಿ ಆಯೋಜನೆಗೊಂಡಿರುವ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಲಕ್ಷಾಂತರಜನರಿಗೆ ಅವಕಾಶ ನೀಡಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಕಿಡಿಕಾರಿದ್ದಾರೆ.

ʼಕ್ರೀಡಾಂಗಣದಲ್ಲಿ ಆಟವನ್ನು ಆನಂದಿಸದಂತೆ ಕ್ರಿಕೆಟ್‌ ಅಭಿಮಾನಿಗಳನ್ನು ನಿರ್ಬಂಧಿಸಿದ್ದರೂ, ಉತ್ತರಾಖಂಡದಲ್ಲಿ ನಡೆಯುವ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರಿಗೆ ವಿನಾಯಿತಿ ನೀಡಲಾಗಿದೆ. ಧನ್ಯವಾದಗಳುʼ ಎಂದು ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಕೇಂದ್ರದ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ,ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 24,492 ಪ್ರಕರಣಗಳು ವರದಿಯಾಗಿವೆ. 131 ಮಂದಿ ಮೃತಪಟ್ಟಿದ್ದು, ಇನ್ನೂ 2.23 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

ADVERTISEMENT

COVID-19 के बड़ते प्रकोप के कारण T20 क्रिकेट मैच देखने पर तो स्टेडियम में आने पर हज़ारों श्रोताओं पर रोक लेकिन कुंभ में लाखों श्रद्धालुओं को उत्तराखंड में छूट!! धन्यवाद।

— digvijaya singh (@digvijaya_28) March 16, 2021

ಅಹಮದಾಬಾದ್‌ನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ಪರಿಗಣಿಸಿ ಗುಜರಾತ್‌ ಕ್ರಿಕೆಟ್‌ ಮಂಡಳಿಯು (ಜಿಸಿಎ) ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಆಡಲಿರುವ ಉಳಿದ ಮೂರು ಟಿ-20 ಪಂದ್ಯಗಳನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಿದೆ.ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೇ 16, 18 ಮತ್ತು 20ರಂದು ಮೂರು, ನಾಲ್ಕು ಮತ್ತು ಐದನೇ ಪಂದ್ಯಗಳು ನಡೆಯಲಿವೆ.

ಮಾತ್ರವಲ್ಲದೆ ಕುಂಭಮೇಳದ ವೇಳೆ ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳು72 ಗಂಟೆಗಳ ಮೊದಲು ಕೋವಿಡ್-19 ನೆಗೆಟಿವ್ ವರದಿಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿತೀರಥ್ ಸಿಂಗ್ ರಾವತ್ ಸೋಮವಾರ ಹೇಳಿದ್ದರು.ಈ ಬಗ್ಗೆ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.