ಕೋಟಾ (ರಾಜಸ್ಥಾನ): ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಭ್ರಷ್ಟ ಸಚಿವರನ್ನು ರಕ್ಷಿಸುವ ಮೂಲಕ ತಮ್ಮ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಕಾಂಗ್ರೆಸ್ ಶಾಸಕ ಭರತ್ ಸಿಂಗ್ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಅಶೋಕ್ ಚಂದನ ಅವರು, ಬಂಡಿ ಜಿಲ್ಲಾ ಕೇಂದ್ರದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ವಿದ್ಯುತ್ ಸಮಸ್ಯೆಗಳ ಕುರಿತು ಧರಣಿ ನಡೆಸಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆ.
ಸಂಗೋಡ್ ಶಾಸಕ ಮತ್ತು ಅವರ ಬೆಂಬಲಿಗರು ಕೋಟಾ ನಗರದ ಗುಮಾನ್‌ಪುರ ಪ್ರದೇಶದಲ್ಲಿನ ಅವರ ನಿವಾಸದ ಹೊರಗೆ ಮಂಗಳವಾರ ರಾವಣನ ಪ್ರತಿಕೃತಿಯನ್ನು ಸಹ ದಹಿಸಿದ್ದಾರೆ.
ಅತ್ತ, ರಿವರ್‌ಫ್ರಂಟ್‌ನ ಉದ್ಘಾಟನೆಯು ಅಬ್ಬರದಿಂದ ನಡೆಯುತ್ತಿದ್ದಾಗ ಇತ್ತ ಶಾಸಕ ತಲೆ ಬೋಳಿಸಿಕೊಂಡಿದ್ದಾರೆ.
ರಾಜ್ಯ ಗಣಿಗಾರಿಕೆ ಸಚಿವ ಪ್ರಮೋದ್ ಜೈನ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಭರತ್ ಸಿಂಗ್ ಈ ಹಿಂದೆ ಗೆಹಲೋತ್ ಅವರಿಗೆ ಪತ್ರವನ್ನು ಕಳುಹಿಸಿದ್ದರು.
ಗೆಹಲೋತ್ ಅವರು ಮಂತ್ರಿಯನ್ನು ರಕ್ಷಿಸಲು ತಮ್ಮ ಸಮಗ್ರತೆ ಮತ್ತು ತತ್ವಗಳನ್ನು ಬಲಿ ಕೊಡುತ್ತಿದ್ದಾರೆ ಎಂದು ಶಾಸಕ ಆರೋಪಿಸಿದ್ದಾರೆ.
ಇದು ಸಿಎಂ ವಿರುದ್ಧದ ಪ್ರತಿಭಟನೆಯಾಗಿದೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.