ADVERTISEMENT

ಮೋದಿಗಿಂತ ರಾಹುಲ್‌ಗೆ ಅಧಿಕ ಅಂತರದ ಜಯ, ಪ್ರಧಾನಿ 5 ವರ್ಷ ಪೂರೈಸಲ್ಲ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2024, 6:51 IST
Last Updated 8 ಜೂನ್ 2024, 6:51 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ</p></div>

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

   

ಪಿಟಿಐ ಚಿತ್ರಗಳು

ನವದೆಹಲಿ: ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಅವರು ಐದು ವರ್ಷಗಳ ಅಧಿಕಾರಾವಧಿ ಪೂರೈಸುವುದಿಲ್ಲ ಎಂದು ಕಾಂಗ್ರೆಸ್‌ ಸಂಸದ ಗೌರವ್ ಗೊಗೊಯಿ ಹೇಳಿದ್ದಾರೆ.

ADVERTISEMENT

ಲೋಕಸಭಾ ಚುನಾವಣೆ ಫಲಿತಾಂಶದ ಸಾಧಕ–ಬಾಧಕಗಳು ಹಾಗೂ ಸಂಸದೀಯ ಪಕ್ಷದ ನಾಯಕರ ಆಯ್ಕೆ ಕುರಿತು ಕಾಂಗ್ರೆಸ್‌ ಇಂದು ರಾಷ್ಟ್ರರಾಜಧಾನಿಯಲ್ಲಿ ಸಭೆ ನಡೆಯುತ್ತಿದೆ. ಸಭೆಗೆ ಹಾಜರಾಗಲು ದೆಹಲಿಗೆ ಬಂದಿರುವ ಗೊಗೊಯಿ, ಪ್ರಧಾನಿ ಕುರಿತು ಮಾತನಾಡಿದ್ದಾರೆ.

ಅಸ್ಸಾಂನ ಜೋರ್ಹತ್‌ ಕ್ಷೇತ್ರದ ಸಂಸದ ಗೊಗೊಯಿ, 'ಉತ್ತರ ಪ್ರದೇಶದ ಮತದಾನವನ್ನು ಗಮನಿಸಿದರೆ, ಜನರು ನರೇಂದ್ರ ಮೋದಿಯವರನ್ನು ತಿರಸ್ಕರಿಸಿದ್ದಾರೆ ಎಂಬುದು ತಿಳಿಯುತ್ತದೆ. ರಾಯ್‌ಬರೇಲಿಯಲ್ಲಿನ ಗೆಲುವಿನ ಅಂತರವು, ವಾರಾಣಸಿ ಕ್ಷೇತ್ರಕ್ಕಿಂತಲೂ ಅಧಿಕವಾಗಿದೆ. ಪ್ರಧಾನಿಯಗಿ ಮೋದಿ ಐದು ವರ್ಷ ಪೂರೈಸುವುದಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಿಜೆಪಿ ಅಭ್ಯರ್ಥಿ ದಿನೇಶ್‌ ಪ್ರತಾಪ್‌ ಸಿಂಗ್‌ ಎದುರು ಬರೋಬ್ಬರಿ 3.90 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ವಾರಾಣಸಿ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಗೆದ್ದಿರುವ ಪ್ರಧಾನಿ ಮೋದಿ, ಕಾಂಗ್ರೆಸ್‌ನ ಅಜಯ್‌ ರಾಯ್‌ ವಿರುದ್ಧ ಜಯ ಸಾಧಿಸಿದ್ದಾರೆ. 2014ರಲ್ಲಿ 3.71 ಲಕ್ಷ ಮತಗಳು ಹಾಗೂ 2019ರಲ್ಲಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಮೋದಿ, ಈ ಸಲ 1.52 ಲಕ್ಷ ಮತಗಳ ಅಂತರದಿಂದಷ್ಟೇ ಗೆದ್ದಿದ್ದಾರೆ.

ವಿಶೇಷವೆಂದರೆ ಅಂತರವಷ್ಟೇ ಅಲ್ಲ, ಮೋದಿ ಅವರ ಮತ ಗಳಿಕೆಯೂ ತಗ್ಗಿದೆ. ಕಳೆದ ಸಲ 6.74 ಲಕ್ಷ ಮತಗಳನ್ನು ಪಡೆದಿದ್ದ ಅವರಿಗೆ, ಈ ಬಾರಿ 6.12 ಲಕ್ಷ ಮತಗಳಷ್ಟೇ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.