ADVERTISEMENT

ಭಾರತ ಭೂಲೋಕದ ಸ್ವರ್ಗ, ಭಾರತೀಯ ಮುಸ್ಲಿಮನಾಗಿರಲು ಹೆಮ್ಮೆಯಿದೆ: ಗುಲಾಂ ನಬಿ ಆಜಾದ್

ಏಜೆನ್ಸೀಸ್
Published 9 ಫೆಬ್ರುವರಿ 2021, 7:56 IST
Last Updated 9 ಫೆಬ್ರುವರಿ 2021, 7:56 IST
ಗುಲಾಂ ನಬಿ ಆಜಾದ್ (ಚಿತ್ರ ಕೃಪೆ – ರಾಜ್ಯಸಭಾ ಟಿವಿ)
ಗುಲಾಂ ನಬಿ ಆಜಾದ್ (ಚಿತ್ರ ಕೃಪೆ – ರಾಜ್ಯಸಭಾ ಟಿವಿ)   

ನವದೆಹಲಿ: ‘ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಪಾಕಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಓದಿದಾಗ, ನಾನೊಬ್ಬ ಹಿಂದುಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಮಂಗಳವಾರ ಹೇಳಿದರು.

ಸದಸ್ಯತ್ವದಿಂದ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಅವರು, ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನನಗೆ ಜನರ ಪ್ರೀತಿ ದೊರೆತಿದೆ’ ಎಂದು ಹೇಳಿದ್ದಾರೆ.

2005ರಲ್ಲಿ ತಾವು ಜಮ್ಮು–ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗಿನಿಂದ ಅಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ನೆನಪಿಸಿಕೊಂಡ ಅವರು, ಭಯೋತ್ಪಾದನೆ ಈ ದೇಶದಲ್ಲಿ ಕೊನೆಗೊಳ್ಳಲಿ ಎಂದು ‘ಅಲ್ಲಾ’ನನ್ನು ಪ್ರಾರ್ಥಿಸುತ್ತೇನೆ ಎಂದರು.

ಆಜಾದ್ ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ.

ಇದಕ್ಕೂ ಮುನ್ನ, ನಿವೃತ್ತರಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ವಿದಾಯ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗುಲಾಂ ನಬಿ ಆಜಾದ್ ಬಗ್ಗೆ ಪ್ರಸ್ತಾಪಿಸುವಾಗ ಭಾವುಕರಾದರು. ಆಜಾದ್ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.