ADVERTISEMENT

ಜಾರ್ಖಂಡ್ | ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ಹಾರಾಟಕ್ಕೆ 45 ನಿಮಿಷ ತಡೆದ ಎಟಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2024, 12:34 IST
Last Updated 15 ನವೆಂಬರ್ 2024, 12:34 IST
   

ಗೊಡ್ಡಾ: ವಿಮಾನ ಸಂಚಾರ ನಿಯಂತ್ರಣ ಕೇಂದ್ರ ಒಪ್ಪಿಗೆ ನೀಡದ ಕಾರಣ ಜಾರ್ಖಂಡ್‌ನ ಗೊಡ್ಡಾದಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ಅನ್ನು ತಡೆದ ಘಟನೆ ನಡೆಯಿತು.

ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ಅನ್ನು 45 ನಿಮಿಷಗಳ ಕಾಲ ತಡೆಯಲಾಗಿತ್ತು. 

ರಾಹುಲ್‌ ಅವರ ರ್‍ಯಾಲಿಯ ವೇಳಾಪಟ್ಟಿಯನ್ನು ಅಡ್ಡಿಪಡಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಪ್ರಧಾನಿ ಅವರು ಡಿಯೊಘರ್‌ನಲ್ಲಿ ರ್‍ಯಾಲಿ ನಡೆಸುತ್ತಿದ್ದು ಎಟಿಸಿ ಅಧಿಕಾರಿಗಳು ಅವರಿಗೇ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ ಎಂದು ಕಿಡಿಕಾರಿದರು.

ADVERTISEMENT

ಈ ಘಟನೆಯ ಕುರಿತು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ‘ಪ್ರಚಾರದಲ್ಲಿ ಸಮಬಲದ ಮೈದಾನ ಇರಬೇಕು. ಪ್ರಧಾನ ಮಂತ್ರಿಯವರ ಪ್ರಚಾರವು ಇತರರ ಪ್ರಚಾರಕ್ಕಿಂತ ಆದ್ಯತೆಯನ್ನು ಪಡೆಯಲು ಸಾಧ್ಯವಿಲ್ಲ. ಇಂದು ರಾಹುಲ್ ಗಾಂಧಿ ಅವರು ಜಾರ್ಖಂಡ್‌ನಲ್ಲಿ ಮುಕ್ಕಾಲು ಗಂಟೆ ಕಾದಿದ್ದಾರೆ’ ಎಂದು ಪತ್ರದಲ್ಲಿ ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.