ADVERTISEMENT

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣಾ ವೇಳಾಪಟ್ಟಿ ಬಿಡುಗಡೆ: ಅ.17ಕ್ಕೆ ಮತದಾನ 

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 9:10 IST
Last Updated 22 ಸೆಪ್ಟೆಂಬರ್ 2022, 9:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆಯ ವೇಳಾಪಟ್ಟಿಯನ್ನು ಕಾಂಗ್ರೆಸ್‌ ಗುರುವಾರ ಬಿಡುಗಡೆ ಮಾಡಿದೆ.‌

ವೇಳಾಪಟ್ಟಿ ಇಂತಿದೆ...

– ಚುನಾವಣೆ ಅಧಿಸೂಚನೆ ಇಂದಿನಿಂದಲೇ (ಸೆ.22) ಜಾರಿಯಾಗಲಿದೆ.

ADVERTISEMENT

– ಸೆ. 24 ರಿಂದ 30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.

– ಅ.1ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಲಿದೆ. ಕ್ರಮ ಬದ್ಧವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಂದು ಘೋಷಿಸಲಾಗುತ್ತದೆ.

– ನಾಮಪತ್ರ ಹಿಂಪಡೆಯಲು ಅ. 8 ಕೊನೆ ದಿನ. ಕಣದಲ್ಲಿ ಉಳಿಯಲಿರುವ ಅಭ್ಯರ್ಥಿಗಳ ಪಟ್ಟಿ ಅದೇ ದಿನ ಬಿಡುಗಡೆ.

– ಅಗತ್ಯವಿದ್ದಲ್ಲಿ ಅ. 17ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 4ರ ವರೆಗೆ ಮತದಾನ ನಡೆಯಲಿದೆ.

– ಅ. 19ರಂದು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

ನಾಮಪತ್ರ ಅರ್ಜಿಗಳು ಎಐಸಿಸಿ ಕೇಂದ್ರ ಕಚೇರಿಯಲ್ಲಿ ದೊರೆಯಲಿದೆ ಎಂದು ಕಾಂಗ್ರೆಸ್‌ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್‌ ಮುಖಂಡ ಮಧುಸೂದನ ಮಿಸ್ತ್ರಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ ದೇಶದಲ್ಲಿ ಸದ್ದು ಮಾಡುತ್ತಿದೆ. ರಾಹುಲ್‌ ಗಾಂಧಿಯರವೇ ಅಧ್ಯಕ್ಷರಾಗಲಿ ಎಂದು ಹಲವು ಪಿಸಿಸಿಗಳು (ರಾಜ್ಯ ಕಾಂಗ್ರೆಸ್‌ ಘಟಕಗಳು) ನಿರ್ಣಯ ಕೈಗೊಂಡಿವೆ. ಹಲವು ನಾಯಕರು ರಾಹುಲ್‌ ಮೇಲೆ ಒತ್ತಡವನ್ನೂ ಹೇರಿದ್ದಾರೆ. ಈ ಮಧ್ಯೆ ಸಂಸದ ಶಶಿ ತರೂರ್‌ ಅವರು ಸ್ಪರ್ಧೆಗೆ ಮುಂದಾಗಿದ್ದು, ಅವರ ವಿರುದ್ಧ ಗಾಂಧಿ ನಿಷ್ಠ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.