ಭುವನೇಶ್ವರ: ಒಡಿಶಾದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಬದಲಾಯಿಸಿದ್ದು, ನೀಲಗಿರಿ ವಿಧಾನಸಭಾ ಕ್ಷೇತ್ರದಿಂದ ಅಕ್ಷಯ ಆಚಾರ್ಯ ಅವರನ್ನು ಕಣಕ್ಕಿಳಿಸಿದೆ.
ದೇಬಾಶಿಶ್ ನಾಯಕ್, ಕಾಂಗ್ರೆಸ್ ವಕ್ತಾರ ಸುದರ್ಶನ್ ದಾಸ್, ಹಿಮಾಂಶು ಚೌಲಿಯಾ, ಸುದರ್ಶನ್ ಸಾಹೂ ಅವರನ್ನು ಹೊಸದಾಗಿ ಕಣಕ್ಕೆ ಇಳಿಸಲಾಗಿದೆ. ಈ ಹಿಂದೆ ಐವರಿಗೆ ನೀಡಿದ್ದ ಪಕ್ಷದ ಬಿ.ಪಾರಂ ಅನ್ನು ವಾಪಸ್ ಪಡೆಯಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಒಡಿಶಾದ 147 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 145 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಉಳಿದ 2 ಸ್ಥಾನಗಳನ್ನು ಜೆಎಂಎಂ ಮತ್ತು ಸಿಪಿಐ(ಎಂ)ಗೆ ಬಿಟ್ಟುಕೊಟ್ಟಿದೆ.
ಮೇ 13ರಿಂದ ಜೂನ್ 1ರವರೆಗೆ ನಾಲ್ಕು ಹಂತಗಳಲ್ಲಿ ಒಡಿಶಾದಲ್ಲಿ ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.