ADVERTISEMENT

ಜಗನ್ ಜೊತೆ ಆಸ್ತಿ ವಿವಾದ: ಶರ್ಮಿಳಾ ಭದ್ರತೆ ಹೆಚ್ಚಿಸಲು ಕಾಂಗ್ರೆಸ್ ಮನವಿ

ಪಿಟಿಐ
Published 1 ನವೆಂಬರ್ 2024, 9:29 IST
Last Updated 1 ನವೆಂಬರ್ 2024, 9:29 IST
<div class="paragraphs"><p>ವೈ.ಎಸ್ ಶರ್ಮಿಳಾ</p></div>

ವೈ.ಎಸ್ ಶರ್ಮಿಳಾ

   

– ಪಿಟಿಐ ಸಂಗ್ರಹ ಚಿತ್ರ

ಅಮರಾವತಿ: ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್‌ ಶರ್ಮಿಳಾ ಹಾಗೂ ಅವರ ಸಹೋದರ ಮಾಜಿ ಮುಖ್ಯಮಂತ್ರಿ ವೈ.ಎಸ್ ಜಗನ್‌ ಮೋಹನ್‌ ರೆಡ್ಡಿ ನಡುವೆ ಆಸ್ತಿ ಹಂಚಿಕೆ ಸಂಬಂಧ ತಕರಾರು ಎದ್ದಿರುವ ಬೆನ್ನಲ್ಲೇ, ರಾಜ್ಯದಲ್ಲಿ ಶರ್ಮಿಳಾ ಅವರ ಭದ್ರತೆ ಹೆಚ್ಚಿಸಬೇಕು ಎಂದು ಆಂಧ್ರ ಪ್ರದೇಶದ ಕಾಂಗ್ರೆಸ್ ನಾಯರೊಬ್ಬರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ADVERTISEMENT

ಶರ್ಮಿಳಾ ಅವರ ಸುರಕ್ಷತೆಗೆ ಬೆದರಿಕೆ ಇದೆ. ಹೀಗಾಗಿ ಅವರಿಗೆ ಒದಗಿಸಿರುವ ಭದ್ರತೆ ಹೆಚ್ಚಿಸಬೇಕು ಎಂದು ಕೋರಿದ್ದಾರೆ.

ಈ ಬಗ್ಗೆ ಆಂಧ್ರ ಪ್ರದೇಶ ಡಿ.ಜಿ.ಪಿಗೆ ಪತ್ರ ಬರೆದಿರುವ ರಾಜ್ಯ ಕಾಂಗ್ರೆಸ್‌ನ ಆಡಳಿತ ಹಾಗೂ ಸಂಘಟನೆ ಪ್ರಧಾನ ಕಾರ್ಯದರ್ಶಿ ದ್ವಾರಕಾ ತಿರುಮಲ ರಾವ್‌, ಶರ್ಮಿಳಾ ಅವರ ಭದ್ರತೆಯನ್ನು ‘ವೈ’ ಶ್ರೇಣಿಗೆ ಹೆಚ್ಚಿಸಬೇಕು, 4+4 ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ವಿನಂತಿಸಿದ್ದಾರೆ.

‘ರಾಜಕೀಯದ ಪ್ರಮುಖ ನಾಯಕಿಯೂ, ಆಂಧ್ರ ಪ್ರದೇಶದ ಪ್ರಮುಖ ಪ್ರಕ್ಷದ ಮುಂದಾಳುವೂ ಆಗಿರುವ ವೈ.ಎಸ್‌. ಶರ್ಮಿಳಾ ರೆಡ್ಡಿ ಹಲವು ಸಾಮಾಜಿಕ ಚಳುವಳಿ, ಸಮಾವೇಶದಲ್ಲಿ ಭಾಗಿಯಾಗುತ್ತಿರುತ್ತಾರೆ. ಸದ್ಯದ ರಾಜಕೀಯ ಪರಿಸ್ಥಿತಿಯು ಅವರ ರಕ್ಷಣೆಗೆ ಬೆದರಿಕೆಯೊಡ್ಡುತ್ತಿದೆ. ಹೀಗಾಗಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು ವೈ ಶ್ರೇಣಿಗೆ ವಿಸ್ತರಿಸಬೇಕು’ ಎಂದು ರಾಜಾ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸದ್ಯ ಶರ್ಮಿಳಾ ಅವರಿಗೆ ತೆಲಂಗಾಣದಲ್ಲಿ ವೈ ಶ್ರೇಣಿಯ ಭದ್ರತೆ ಇದೆ. ಆಂಧ್ರ ಪ್ರದೇಶದಲ್ಲೂ ಅದನ್ನು ವಿಸ್ತರಿಸಬೇಕು ಎಂದು ರಾಜಾ ಆಗ್ರಹಿಸಿದ್ದಾರೆ. ಅಲ್ಲದೆ ಈಗಿರುವ 2+2 ಭದ್ರತೆಯನ್ನು 4+4ಗೆ ಹೆಚ್ಚಿಸಬೇಕು ಎಂದು ವಿನಂತಿಸಿದ್ದಾರೆ. ಅಲ್ಲದೆ ಅವರ ಭದ್ರತೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.