ADVERTISEMENT

ಉಪಚುನಾವಣೆ ಇರುವ ಕ್ಷೇತ್ರಗಳಿಗಷ್ಟೇ ರಸಗೊಬ್ಬರ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಪಿಟಿಐ
Published 27 ಅಕ್ಟೋಬರ್ 2024, 12:46 IST
Last Updated 27 ಅಕ್ಟೋಬರ್ 2024, 12:46 IST
<div class="paragraphs"><p>ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್</p></div>

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್

   

ಪಿಟಿಐ ಚಿತ್ರ

ನವದೆಹಲಿ: ಮಧ್ಯಪ್ರದೇಶದಲ್ಲಿ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಮಾತ್ರವೇ ರಸಗೊಬ್ಬರ ಪೂರೈಸಲಾಗುತ್ತಿದೆ ಎಂದು ಕಾಂಗ್ರೆಸ್‌ ಭಾನುವಾರ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT

ರಾಜ್ಯದಾದ್ಯಂತ ರೈತರು ಡಿಎಪಿಗಾಗಿ ರಾತ್ರಿ ಇಡೀ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಉಪ ಚುನಾವಣೆ ನಡೆಯಲಿರುವ ಬುಧನಿ (ಸೆಹೊರ್‌ ಜಿಲ್ಲೆ) ಹಾಗೂ ವಿಜಯಪುರ (ಶಿಯೋಪರ್‌ ಜಿಲ್ಲೆ) ಕ್ಷೇತ್ರಗಳಲ್ಲಿ ಮುಂಚಿತವಾಗಿಯೇ ರಸಗೊಬ್ಬರ ವಿತರಿಸಲಾಗಿದೆ ಎಂದು ಪ್ರತಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯ ಚಿತ್ರವನ್ನು ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

'ಮಧ್ಯಪ್ರದೇಶದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಎರಡೇ ಕ್ಷೇತ್ರಗಳಿಗೆ ರಸಗೊಬ್ಬರ ವಿತರಿಸುತ್ತಿರುವುದು, ರಾಜ್ಯದ ಇತರ ರೈತರಿಗೆ ಮಾಡುತ್ತಿರುವ ದ್ರೋಹ' ಎಂದು ಕಿಡಿಕಾರಿದ್ದಾರೆ.

'ರಸಗೊಬ್ಬರವು ಎಲ್ಲರಿಗೂ ಸಮಾನ ಪ್ರಮಾಣದಲ್ಲಿ ಬೇಕಾಗಿದೆ. ಆದರೆ, ಇತರ ಭಾಗಗಳ ರೈತರು, ತಮಗೆ ಅಗತ್ಯವಿರುವುದರಲ್ಲಿ ಶೇ 5ರಷ್ಟನ್ನೂ ಪಡೆಯಲು ಸಾಧ್ಯವಾಗಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, 'ಚುನಾವಣೆಯ ಲಾಭದ ದೃಷ್ಟಿಯಿಂದ ರಸಗೊಬ್ಬರ ವಿತರಿಸುತ್ತಿರುವುದು ಬಿಜೆಪಿ ಸರ್ಕಾರ ನಾಚಿಕೆಗೇಡು ಧೋರಣೆಯನ್ನು ತೋರಿಸುತ್ತದೆ. ಅವರು ಮತ ಗಳಿಕೆಗಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ' ಎಂದು ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.